Gift ಅಂದರೆ ಇದು..!!| ಮಗ, ಸೊಸೆಗೆ ₹640 ಕೋಟಿ ವಿಲ್ಲಾ ಗಿಫ್ಟ್ ಕೊಟ್ಟ ಅಂಬಾನಿ!

ಮುಂಬೈ: ರಿಲಯನ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹದ ಸುದ್ದಿಗಳನ್ನು ಕೇಳಿ ಇಡೀ ವಿಶ್ವವೇ ಅಚ್ಚರಿಪಡುತ್ತಿದೆ. ಕಳೆದ ಹಲವು ಸಮಯದಿಂದ ನಡೆಯುತ್ತಿರುವ ವಿವಾಹಪೂರ್ವ ಕಾರ್ಯಕ್ರಮಗಳು ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಮತ್ತೊಂದು ಸುದ್ದಿಯ ಮೂಲಕ ಮುಖೇಶ್ ಅಂಬಾನಿ ಸುದ್ದಿಯಾಗಿದ್ದಾರೆ. ಹೌದು, ತಮ್ಮ ಮಗ ಮತ್ತು ಸೊಸೆಗೆ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿ ಭರ್ಜರಿ ಉಡುಗೊರೆ ನೀಡಿದ್ದಾರೆ.



ಅನಂತ್ ಅಂಬಾನಿ ಮತ್ತು  ರಾಧಿಕಾ ಮರ್ಚೆಂಟ್ ಜೋಡಿಗೆ ದುಬೈನ ಪಾಮ್ ಜುಮೈರಾದಲ್ಲಿರುವ ಬರೋಬ್ಬರಿ ₹640 ಕೋಟಿ ಮೌಲ್ಯದ ವಿಲ್ಲಾ ಉಡುಗೊರೆಯಾಗಿ ನೀಡಲಾಗಿದೆ. ಇದು ದುಬೈನ ಅತಿ ದುಬಾರಿ ವಿಲ್ಲಾಗಳ ಪೈಕಿ ಒಂದಾಗಿದ್ದು, ಬರೋಬ್ಬರಿ 3 ಸಾವಿರ ಚದರ ಅಡಿ ಪ್ರದೇಶದಲ್ಲಿ ನಿರ್ಮಾಣವಾಗಿದೆ. 10 ಬೆಡ್ ರೂಂ, ಹಲವು ಕೊಠಡಿ, 70 ಮೀ. ಉದ್ದದ ಖಾಸಗಿ ಬೀಚ್ ಜೊತೆಗೆ ಅತ್ಯಾಕರ್ಷಕ ಒಳಾಂಗಣ ವಿನ್ಯಾಸವನ್ನು ಈ ವಿಲ್ಲಾ ಹೊಂದಿದೆ ಎನ್ನಲಾಗಿದೆ.ಈ ಮೂಲಕ ಭರ್ಜರಿ ಉಡುಗೊರೆ ನೀಡಿ ವಧೂವರರನ್ನು ಅಂಬಾನಿ ದಂಪತಿ ಆಶೀರ್ವದಿಸಿದ್ದಾರೆ.