ನವದೆಹಲಿ: ಇದು ಸ್ಪರ್ಧಾತ್ಮಕ ಜಗತ್ತು. ಅದರಲ್ಲೂ ನಿರುದ್ಯೋಗ ಮುಗಿಲು ಮುಟ್ಟಿರುವ ಇಂದಿನ ದಿನಗಳಲ್ಲಿ ಪ್ರತೀ ಉದ್ಯೋಗಕ್ಕೂ ಬಹಳಷ್ಟು ಸ್ಪರ್ಧೇ ಇರುತ್ತದೆ. ಹೀಗಾಗಿ ಒಂದು ಹುದ್ದೆಗೆ ಅರ್ಜಿ ಕರೆದರೂ ಸಾವಿರಾರು ಅರ್ಜಿಗಳು ಬರುತ್ತವೆ. ಹೀಗೆ ಉದ್ಯೋಗವೊಂದಕ್ಕೆ ಕರೆದ ಅರ್ಜಿಗಳ ಪೈಕಿ ಬಂದ ಒಂದು ಅರ್ಜಿಯನ್ನು ನೋಡಿ ಕಂಪನಿಯ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಂಪನಿಯೊಂದಕ್ಕೆ ಅಕೌಂಟೆಂಟ್ ಹುದ್ದೆಗೆ ಹಲವು ಬಾರಿ ಅರ್ಜಿ ಸಲ್ಲಿಸಿ ವ್ಯಕ್ತಿಯೊಬ್ಬರು ಪ್ರತಿ ಬಾರಿಯೂ ರಿಜೆಕ್ಟ್ ಆಗಿದ್ದಾರೆ. ಆದರೆ ತಮ್ಮ ಪ್ರಯತ್ನವನ್ನು ಬಿಡದೆ ಅದೇ ಕಂಪನಿಗೆ ಪುನಃ ಅರ್ಜಿ ಸಲ್ಲಿಸುವ ವೇಳೆಗೆ ಅವರ ಹತಾಶೆ ಎಷ್ಟಿತ್ತು ಎಂಬುದು ಅವರು ಸಲ್ಲಿಸಿದ್ದ ಅರ್ಜಿಯಿಂದಲೇ ತಿಳಿಯುತ್ತಿದೆ. ಅಕೌಟೆಂಟ್ ಹುದ್ದೆಯಲ್ಲಿದ್ದ ಕಂಪನಿ ಸಿಬ್ಬಂದಿ ನಿಧನರಾದ ಬಳಿಕ ಆ ವ್ಯಕ್ತಿ ಮತ್ತೊಮ್ಮೆ ಅಕೌಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಅರ್ಜಿ ಜತೆಗೆ ಹುದ್ದೆಯು ಖಾಲಿ ಇದೆ ಎಂಬುದಕ್ಕೆ ಪುರಾವೆಯನ್ನು ಸಹ ಲಗತ್ತಿಸಿದ್ದಾರೆ.
ಅವರು ಸಲ್ಲಿಸಿರುವ ಅರ್ಜಿಯಲ್ಲಿ, ನಿಮ್ಮ ಕಚೇರಿಯ ಅಕೌಂಟೆಂಟ್ ಅವರ ಸಾವಿನ ಬಗ್ಗೆ ನನಗೆ ತಿಳಿದಿದೆ. ಮರಣ ಹೊಂದಿದ ಅವರ ಹುದ್ದೆಗೆ ನಾನು ಅರ್ಜಿ ಸಲ್ಲಿಸುತ್ತಿದ್ದೇನೆ. ಈ ಹಿಂದೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದಾಗಿ ಆ ವ್ಯಕ್ತಿ ತನ್ನ ಅರ್ಜಿಯಲ್ಲಿ ತಿಳಿಸಿರುವುದಲ್ಲದೆ, ಪ್ರತಿ ಬಾರಿಯೂ ಕಂಪನಿಯು ಖಾಲಿ ಹುದ್ದೆ ಇಲ್ಲ ಎಂಬ ನೆಪ ಹೇಳಿ ತಿರಸ್ಕರಿಸಿದೆ ಎಂದು ಉಲ್ಲೇಖಿಸಿದ್ದಾರೆ.
ಅರ್ಜಿದಾರರ ಉದ್ಯೋಗ
ಅರ್ಜಿ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದನ್ನು ನೊಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಅನೇಕರು ಆತನಿಗೆ ಕೆಲಸ ಸಿಕ್ಕಿತೇ ಎಂದು ಕಾಮೆಂಟ್ ಕೂಡ
ಮಾಡಿದ್ದಾರೆ. ಅಪ್ಲಿಕೇಶನ್‌ನಲ್ಲಿರುವ ಸಂತಾಪ ಸಂದೇಶವನ್ನು ನೋಡಿದ ಜನರು ಆಶ್ಚರ್ಯ
ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ನಿರುದ್ಯೋಗ ಅಥವಾ ಇನ್ನಷ್ಟು ದೊಡ್ಡ ಹುದ್ದೆಯನ್ನು ಬಯಸುವವರ
ಮನಸ್ಥಿತಿ ಯಾವ ಮಟ್ಟಿಗೆ ಸಂವೇದನೆಯನ್ನು ಕಳೆದುಕೊಂಡಿರುತ್ತದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ
ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
Social Icons