ಹಾಸನ: ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲುಪಾಲಾಗಿರುವ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣರ ತಮ್ಮ ಡಾ. ಸೂರಜ್ ರೇವಣ್ಣಗೆ ಇದೀಗ ಬಂಧನ ಭೀತಿ ಎದುರಾಗಿದೆ.
ವಿಧಾನ ಪರಿಷತ್ ಸದಸ್ಯರೂ ಆಗಿರುವ ಡಾ. ಸೂರಜ್ ರೇವಣ್ಣ ವಿರುದ್ಧ ಯುವಕನೋರ್ವ ಸಲಿಂಗ ದೌರ್ಜನ್ಯ ಆರೋಪದಲ್ಲಿ ಹಾಸನದ ಹೊಳೆ ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
ಅರಕಲಗೂಡಿನ ಚೇತನ್ ಎಂಬಾತ ತನಗೆ ಸೂರಜ್ ರೇವಣ್ಣ ಗನ್ನಿಗಡದ ತೋಟದ ಮನೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.
ಇದಕ್ಕೂ ಮೊದಲು ಈತನ ವಿರುದ್ಧ ಸೂರಜ್ ಆಪ್ತನೊಬ್ಬ ಬ್ಲ್ಯಾಕ್‌ಮೇಲ್ ಪ್ರಕರಣ ದಾಖಲಿಸಿದ್ದ.

Social Icons