ನೆಲ್ಯಾಡಿ
ತಾಲ್ಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜ್ಞಾನೋದಯ ಬೆಥನಿ ಪಿಯು ಕಾಲೇಜು, ನೆಲ್ಯಾಡಿಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ, ಅನೇಕ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಚಿನ್ನದ ಪದಕ ವಿಜೇತರು:
- 24 ಕೆ.ಜಿ. ವಿಭಾಗ – ಚೆರಿ ಆನೆಟ್ ರಿಶೆಲ್
- 42 ಕೆ.ಜಿ. ವಿಭಾಗ – ಶ್ರಾವ್ಯ ಕೆ.ಕೆ.
- 36 ಕೆ.ಜಿ. ವಿಭಾಗ – ಜಿಯಾ ಕತೀಜಾ
- 60 ಕೆ.ಜಿ. ವಿಭಾಗ – ಕೌಶಿಕ್
ಬೆಳ್ಳಿ ಪದಕ ವಿಜೇತರು:
- 40 ಕೆ.ಜಿ. ವಿಭಾಗ – ಜೈರಾ ಮಲಿಕ್
- 50 ಕೆ.ಜಿ. ವಿಭಾಗ – ಆಫ್ನಾ
- 50 ಕೆ.ಜಿ. ವಿಭಾಗ – ಅಯಾನ್
ಈ ವೇಳೆ ಜಿಲ್ಲಾ ಮಟ್ಟದ ಸ್ಪರ್ಧೆಗೆ ಚೆರಿ ಆನೆಟ್, ಶ್ರಾವ್ಯ ಕೆ.ಕೆ., ಜಿಯಾ ಕತೀಜಾ ಹಾಗೂ ಕೌಶಿಕ್ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದು, ಮುಂದಿನ ಹಂತದಲ್ಲಿಯೂ ಯಶಸ್ಸು ಲಭಿಸಲಿ ಎಂದು ಹಾರೈಸಿದ್ದಾರೆ.
Social Icons