ಕಡಬ/ದ.ಕ
ಕಡಬ ಪಟ್ಟಣ ಪಂಚಾಯತ್‌ನಲ್ಲಿ ಪ್ರಥಮ ಬಾರಿಗೆ ನಡೆದ 13 ವಾರ್ಡುಗಳಲ್ಲಿನ ಮತದಾನ ಯಶಸ್ವಿಯಾಗಿ ಮತ್ತು ಶಾಂತವಾಗಿ ಮುಕ್ತಾಯಗೊಂಡಿತು. ಒಟ್ಟು 79.83% ಮತದಾನವಾಗಿದೆ.ಮಾನ್ಯ ಜಿಲ್ಲಾಧಿಕಾರಿಗಳು,ಪುತ್ತೂರು ಉಪಆಯುಕ್ತರು,ಕಡಬ ತಹಶಿಲ್ದಾರಾದ ಪ್ರಭಾಕರ ಖಜೂರೆ,ಉಪತಹಶಿಲ್ದಾರ್ ಶಾಯಿದುಲ್ಲಾ ಖಾನ್ ನೇತೃತ್ವದಲ್ಲಿ ಕಡಬ ತಾಲೂಕು ಆಡಳಿತ, ಕಡಬ ಪಟ್ಟಣ ಪಂಚಾಯತ್ ಅಧಿಕಾರಿಗಳು,ಮುಖ್ಯ ಚುನಾವಣಾ ಅಧಿಕಾರಿ ಪ್ರಮೋದ್,ವಿಮಲ್ ಬಾಬು ನೇತೃತ್ವದಲ್ಲಿ ವಿವಿಧ ಸ್ತರಗಳ ವಿಶೇಷ ಚುಣಾವಣಾ ಅಧಿಕಾರಿಗಳು, ಠಾಣಾಧಿಕಾರಿಗಳಾದ ಅಭಿನಂದನ್,ಅಕ್ಷಯ್ ಢವಗಿ,ಈರಯ್ಯ ಇವರ ನೇತೃತ್ವದಲ್ಲಿ ವಿವಿಧ ಠಾಣೆಗಳ ಪೊಲೀಸರು ಚುನಾವಣೆಗೆ ಬೇಕಾದ ಸಕಲ ವ್ಯವಸ್ಥೆಗಳನ್ನು ಮತ್ತು ಭದ್ರತೆಯನ್ನು ಕಲ್ಪಿಸಿದರು.
ವಾರ್ಡ್‌ವಾರು ಮತದಾನ ಶೇಕಡಾವಾರು:
ಕಳಾರ: 77.12%
ಕೋಡಿಬೈಲು: 76.67%
ಪನ್ಯ: 78.26%
ಬೆದ್ರಾಜೆ: 85.02%
ಮಾಲೇಶ್ವರ: 80.69%
ಕಡಬ: 73.59%
ಪಣೆಮಜಲು: 77.00%
ಪಿಜಕಳ: 81.75%
ಮೂರಾಜೆ: 82.59%
ದೊಡ್ಡಕೊಪ್ಪ: 82.60%
ಕೋಡಿಂಬಾಳ: 82.83%
ಮಜ್ಜಾರು: 81.13%
ಪುಳಿಕುಕ್ಕು: 79.26%
ಮತ ಎಣಿಕೆಯು ಅಗಸ್ಟ್ 20 ರಂದು ನಡೆಯಲಿದೆ. ಮತ ಎಣಿಕೆಯು ಕಡಬ ತಾಲೂಕು ಆಡಳಿತ ಸೌಧದಲ್ಲಿ, ಮತ್ತು ಮತ ಪೆಟ್ಟಿಗೆಗಳು ತಾಲೂಕು ಆಡಳಿತ ಸೌಧದ ಸ್ಟ್ರಾಂಗ್ ರೂಮ್‌ನಲ್ಲಿ ಭದ್ರವಾಗಿ ಇರಿಸಲಾಗಿದೆ.
ಕಡಬದ ವಾರ್ಡು 1 ರಿಂದ 13 ವರೆಗೆ ಪ್ರತಿ ವಾರ್ಡ್‌ನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವಿವರಗಳು ಈ ಕೆಳಗಿನಂತಿವೆ
ವಾರ್ಡ್ 1 – ಕಳಾರ (ಹಿಂದುಳಿದ ವರ್ಗ ‘ಎ’ ಮಹಿಳೆ ಮೀಸಲು):
ಕಾಂಗ್ರೆಸ್: ತಮನ್ನಾ ಜಬೀನ್,ಬಿಜೆಪಿ: ಪ್ರೇಮಾ,
ಎಸ್‌ಡಿಪಿಐ ಯಿಂದ ಸಮೀರಾ ಹಾರಿಸ್, ಪಕ್ಷೇತರದಿಂದ ಜೈನಾಬಿ
ವಾರ್ಡ್ 2 – ಕೋಡಿಬೈಲು (ಪರಿಶಿಷ್ಠ ಜಾತಿ ಮಹಿಳೆ):
ಕಾಂಗ್ರೆಸ್: ಮೋಹಿನಿ
ಬಿಜೆಪಿ: ಕುಸುಮ ಅಂಗಡಿಮಾನೆ
ವಾರ್ಡ್ 3 – ಪನ್ಯ (ಸಾಮಾನ್ಯ):
ಕಾಂಗ್ರೆಸ್: ಮಹಮ್ಮದ್ ಪೈಝಲ್
ಬಿಜೆಪಿ: ಆದಂ ಕುಂಡೋಳಿ
ಎಸ್‌ಡಿಪಿಐ: ಹಾರಿಸ್ ಕಳಾರ
ಮುಸ್ಲಿಂ ಲೀಗ್: ಕೆ. ಅಬ್ದುಲ್ ರಝಾಕ್
ವಾರ್ಡ್ 4 – ಬೆದ್ರಾಜೆ (ಸಾಮಾನ್ಯ ಮೀಸಲು):
ಕಾಂಗ್ರೆಸ್: ಸೈಮನ್ ಸಿ. ಜೆ
ಬಿಜೆಪಿ: ಅಶೋಕ್ ಕುಮಾರ್ ಪಿ
ವಾರ್ಡ್ 5 – ಮಾಲೇಶ್ವರ (ಹಿಂದೂಳಿದ ವರ್ಗ ‘ಎ’):
ಬಿಜೆಪಿ: ಪ್ರಕಾಶ್ ಎನ್.ಕೆ.
ಕಾಂಗ್ರೆಸ್: ಹನೀಫ್ ಕೆ.ಎಂ
ವಾರ್ಡ್ 6 – ಕಡಬ (ಸಾಮಾನ್ಯ ಮಹಿಳೆ):
ಕಾಂಗ್ರೆಸ್: ನೀಲಾವತಿ ಶಿವರಾಮ್
ಬಿಜೆಪಿ: ಪ್ರೇಮಾ
ಪಕ್ಷೇತರ: ಆಲೀಸ್ ಚಾಕೊ
ಎಸ್‌ಡಿಪಿಐ: ಸ್ವಾಲಿಯತ್ ಜಸೀರಾ
ವಾರ್ಡ್ 7 – ಪಣೆಮಜಲು (ಹಿಂದೂಳಿದ ವರ್ಗ ‘ಬಿ’):
ಬಿಜೆಪಿ: ಗಣೇಶ್ ಗೌಡ
ಕಾಂಗ್ರೆಸ್: ರೋಹಿತ್ ಗೌಡ
ವಾರ್ಡ್ 8 – ಪಿಜಕ್ಕಳ (ಸಾಮಾನ್ಯ ಮೀಸಲು):
ಕಾಂಗ್ರೆಸ್: ಅಶ್ರ ಶೇಡಿಗುಂಡಿ
ಬಿಜೆಪಿ: ದಯಾನಂದ ಗೌಡ ಪಿ
ವಾರ್ಡ್ 9 – ಮೂರಾಜೆ (ಹಿಂದೂಳಿದ ವರ್ಗ ‘ಎ’)
ಬಿಜೆಪಿ: ಕುಂಞಣ್ಣ ಕುದ್ರಡ್ಕ
ಕಾಂಗ್ರೆಸ್: ಕೃಷ್ಣಪ್ಪ ಪೂಜಾರಿ
ವಾರ್ಡ್ 10 – ದೊಡ್ಡಕೊಪ್ಪ (ಸಾಮಾನ್ಯ ಮಹಿಳೆ):
ಬಿಜೆಪಿ: ಗುಣವತಿರಘುರಾಮ
ಕಾಂಗ್ರೆಸ್: ತುಳಸಿ
ವಾರ್ಡ್ 11 – ಕೋಡಿಂಬಾಳ (ಸಾಮಾನ್ಯ ಮಹಿಳೆ):
ಕಾಂಗ್ರೆಸ್: ಜ್ಯೋತಿ ಡಿ. ಕೊಲ್ಪೆ
ಬಿಜೆಪಿ: ಅಕ್ಷತಾ ಬಾಲಕೃಷ್ಣ ಗೌಡ
ವಾರ್ಡ್ 12 – ಮಜ್ಜಾರು (ಪರಿಶಿಷ್ಠ ಜಾತಿ):
ಬಿಜೆಪಿ: ಮೋಹನ
ಕಾಂಗ್ರೆಸ್: ಉಮೇಶ್ ಮಡ್ಯಡ್ಕ
ವಾರ್ಡ್ 13 – ಪುಳಿಕುಕ್ಕು (ಪರಿಶಿಷ್ಠ ಪಂಗಡ):
ಕಾಂಗ್ರೆಸ್: ಕೃಷ್ಣ ನಾಯಕ
ಬಿಜೆಪಿ: ಸದಾನಂದ ನಾಯಕ ಮುಂತಾದವರು ಸ್ಪರ್ಧಾ ಕಣದಲ್ಲಿದ್ದಾರೆ.
Social Icons