ಲಖನೌ: ತನ್ನ ನವಜಾತ ಶಿಶು ಹಾಗೂ ಪತ್ನಿಯನ್ನು ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಿಸಲು ಹಣವಿಲ್ಲದ ವ್ಯಕ್ತಿಯೊಬ್ಬ ತನ್ನ ಮೂರು ವರ್ಷದ ಪುತ್ರನನ್ನು ಮಾರಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕುಶಿನಗರದ ಬರ್ವಾಪಟ್ಟಿಯಲ್ಲಿ ನಡೆದಿದೆ.
ಬರ್ವಾಪಟ್ಟಿಯ ಹರೀಶ್ ಪಟೇಲ್ ಹೆರಿಗೆಗಾಗಿ ತನ್ನ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ. ಹೆರಿಗೆಯ ಬಳಿಕ ಆಸ್ಪತ್ರೆಯಲ್ಲಿ 4ಸಾವಿರ ಬಿಲ್ ಆಗಿದ್ದು, ಬಡತನದ ಕಾರಣ ಪತ್ನಿ ಮತ್ತು ನವಜಾತ ಶಿಶುವನ್ನು ಡಿಸ್ಟಾರ್ಜ್ ಮಾಡಿಸಲು ಹಣವಿಲ್ಲದೆ ಪರಿತಪಿಸಿದ್ದಾನೆ.
ಆಗ ಆಸ್ಪತ್ರೆಯ ಸಿಬ್ಬಂದಿ ಸಲಹೆ ಮೇರೆಗೆ ತನ್ನ 3ವರ್ಷದ ಮಗನನ್ನು 20 ಸಾವಿರ ರೂ.ಗೆ ಮಾರಾಟ ಮಾಡಿದ್ದಾನೆ. ಸೆ. 7 ರಂದು ಈ ಘಟನೆ ನಡೆದಿದ್ದು, ತಕ್ಷಣ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಮಗುವನ್ನು ರಕ್ಷಿಸಿ ಐವರನ್ನು ಬಂಧಿಸಿದ್ದಾರೆ.

Social Icons