ಕೋಲಾರ: ಪ್ರಥಮ ಪಿಯು ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೋರ್ವಳು ಕಾಲೇಜು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿರುವ ಆಘಾತಕಾರಿ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಹೊರವಲಯದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ವಿಚಾರ ತಿಳಿದ ಕಾಲೇಜು ವಿದ್ಯಾರ್ಥಿ, ಸಿಬ್ಬಂದಿ ವರ್ಗ ಶಾಕ್ ಗೆ ಒಳಗಾಗಿದ್ದಾರೆ.
ಹೆಚ್ಚಿನ
ಚಿಕಿತ್ಸೆಗಾಗಿ ತಾಯಿ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿದ್ಯಾರ್ಥಿನಿಗೆ ತಾನು ಗರ್ಭಿಣಿ ಎನ್ನುವುದು ಗೊತ್ತೇ
ಇರಲಿಲ್ವಾ ಅಥವಾ ಮನೆಯಲ್ಲಿ ಪೋಷಕರು, ಸ್ನೇಹಿತರಿಗೆ
ವಿಚಾರ ಗೊತ್ತಿದ್ರು ಮುಚ್ಚಿಟ್ರಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಬಾಲಕಿಯ ಯುವಕನೊಂದಿಗೆ
ಪ್ರೀತಿಯಲ್ಲಿದ್ದಳು. ಆದರೆ, ಆತ ಯಾರು ಏನು ಎಂಬ
ವಿಚಾರ ತಿಳಿದು ಬಂದಿಲ್ಲ. ಬಾಲಕಿಯ ತಲೆಕೆಡಿಸಿ ಆಕೆಯನ್ನು ಗರ್ಭಿಣಿ ಮಾಡಿದವನಿಗಾಗಿ ಹುಡುಕಾಟ
ನಡೆಯುತ್ತಿದ್ದು, ಆರೋಪಿಯ ಬಂಧನಕ್ಕಾಗಿ
ಪೊಲೀಸರು ಬಲೆ ಬೀಸಿದ್ದಾರೆ.
Social Icons