ನೆಲ್ಯಾಡಿ
ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿ ಶಿವ ಸುಬ್ರಹ್ಮಣ್ಯ ಜಿಲ್ಲಾ ಮಟ್ಟದ ಇನ್‌ಲೈನ್ ಸ್ಕೆಟಿಂಗ್ ಸ್ಪರ್ಧೆಯಲ್ಲಿ ಅಸಾಧಾರಣ ಸಾಧನೆ ಮಾಡಿದ್ದು, ಇದೀಗ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಮಂಗಳೂರು ಸ್ಕೆಟ್ ಸಿಟಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ, ಶಿವ ಸುಬ್ರಹ್ಮಣ್ಯ 500 ಮೀ. ಹಾಗೂ 100 ಮೀ. ಓಟಗಳಲ್ಲಿ ತನ್ನ ಚಾತುರ್ಯವನ್ನು ತೋರಿಸಿ ಬೆಳ್ಳಿ ಪದಕ ಗಳಿಸಿದ್ದಾರೆ.
ಇದೇ ವೇದಿಕೆಯಲ್ಲಿ ಸಂಸ್ಥೆಯ ಇತರ ವಿದ್ಯಾರ್ಥಿಗಳಾದ ಕೃತಿಕ್ (1000 ಮೀ. – ಬೆಳ್ಳಿ), ಯಕ್ಷಿತ್ (500 ಮೀ. ಮತ್ತು 100 ಮೀ. – ಕಂಚು), ಶ್ರೇಯಸ್ (1000 ಮೀ. – ಕಂಚು) ಪದಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಸಂಸ್ಥೆಯ ಸಂಚಾಲಕರಾದ ಫಾ. ಸ್ಯಾಮ್ಯುವೆಲ್ ಚಾರ್ಜ್, ಫಾ. ಜೈಸನ್ ಸೈಮನ್, ಪ್ರಾಂಶುಪಾಲ ಫಾ. ವರ್ಗೀಸ್ ಕೈಪನಡ್ಕ, ಉಪಪ್ರಾಂಶುಪಾಲ ಜೋಸ್ ಎಂ.ಜೆ., ಹಾಗೂ ಮುಖ್ಯಶಿಕ್ಷಕ ಜಾರ್ಜ್ ಕೆ. ತೋಮಸ್ ವಿದ್ಯಾರ್ಥಿಗಳ ಸಾಧನೆಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.
ಈ ಯಶಸ್ಸು ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಹಾಗೂ ಶಿಕ್ಷಕರ ಪ್ರೋತ್ಸಾಹದ ಫಲವಾಗಿದ್ದು, ರಾಜ್ಯಮಟ್ಟದಲ್ಲಿ ಇನ್ನಷ್ಟು ಮೆರುಗು ತರುವ ನಿರೀಕ್ಷೆ ವ್ಯಕ್ತವಾಗಿದೆ.
Social Icons