ಮಂಗಳೂರು/ದ.ಕ
ಏಷ್ಯಾಟೆಕ್ ಗ್ರೂಪ್ ಆಫ್ ಶಿಕ್ಷಣ ಸಂಸ್ಥೆಗಳ ಪಡೀಲ್ ಮತ್ತು ಕಂಕನಾಡಿ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆಯು ನೆರವೇರಿತು.
ವಿದ್ಯಾರ್ಥಿಗಳ ಸಕ್ರಿಯವಾದ ಭಾಗವಹಿಸುವಿಕೆಯಿಂದ ಉತ್ಸಾಹಭರಿತ ವಾತಾವರಣದಲ್ಲಿ ಮತದಾನ ಪ್ರಕ್ರಿಯೆ ನಡೆದಿದ್ದು, ಫಲಿತಾಂಶವನ್ನು ಸಂಸ್ಥೆಯ ಆಡಳಿತ ಮಂಡಳಿ ಪ್ರಕಟಿಸಿದೆ.
ಏಷ್ಯಾಟೆಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಪಡೀಲ್ ಮಂಗಳೂರು ಇಲ್ಲಿನ ವಿದ್ಯಾರ್ಥಿ ಪರಿಷತ್ ಅಧ್ಯಕ್ಷರಾಗಿ ವಿಕಾಸ್ ಆಯ್ಕೆಯಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಗಣೇಶ್, ಕಾರ್ಯದರ್ಶಿಯಾಗಿ ನಮಿತ್, ಕ್ರೀಡಾ ಕಾರ್ಯದರ್ಶಿಯಾಗಿ ಮೋಕ್ಷಿತ್ ಹಾಗೂ ಖಜಾಂಚಿಯಾಗಿ ಮೊಹಮ್ಮದ್ ಶದಾದ್ ಆಯ್ಕೆಯಾದರು.
ಏಷ್ಯಾಟೆಕ್ ಕಾಲೇಜು, ಕಂಕನಾಡಿ ಮಂಗಳೂರು ಇಲ್ಲಿನ ವಿದ್ಯಾರ್ಥಿ ಪರಿಷತ್ ಅಧ್ಯಕ್ಷರಾಗಿ ಮೊಹಮ್ಮದ್ ಹನೀಫ್ ಅಫೀಜ್, ಉಪಾಧ್ಯಕ್ಷೆಯಾಗಿ ಅಮೃತಾ, ಕಾರ್ಯದರ್ಶಿಯಾಗಿ ಅಮ್ರಥಾ ಆಯ್ಕೆಯಾದರು. ಖಜಾಂಚಿಗಳಾಗಿ ಮೇಘನಾ ಮತ್ತು ರೇಶ್ಮಾ, ಕ್ರೀಡಾ ಕಾರ್ಯದರ್ಶಿಗಳಾಗಿ ಶೋಭಿತ್ ಮತ್ತು ರಕ್ಷಿತಾ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಧನ್ಯಾಶ್ರೀ ಹಾಗೂ ಅನ್ಸಲ್ ಡಿ’ಸೋಜಾ ಆಯ್ಕೆಯಾದರು.
ಹೊಸ ತಂಡಕ್ಕೆ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದು, ವಿದ್ಯಾರ್ಥಿ ಪರಿಷತ್ ಮುಖಾಂತರ ಸಂಸ್ಥೆಯ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಮತ್ತಷ್ಟು ಸಕ್ರಿಯಗೊಳ್ಳಲಿವೆ ಎಂಬ ನಿರೀಕ್ಷೆಯು ವ್ಯಕ್ತವಾಗಿದೆ.
Social Icons