Kadaba:- ಕಡಬ ಆಟೋ ಮಾಲಕ-ಚಾಲಕ ಸಂಘದಿಂದ ಭಾವೈಕ್ಯತೆಯ ಧ್ವಜಾರೋಹಣ.

ಕಡಬ/ದ.ಕ 

79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಡಬ ಆಟೋ ಮಾಲಕ-ಚಾಲಕ ಸಂಘದ ವತಿಯಿಂದ ಭಾವೈಕ್ಯತೆ ಹಾಗೂ ದೇಶಭಕ್ತಿಯ ಉತ್ಸಾಹದಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಭಾರತೀಯ ಸೇನೆಯ ನಿವೃತ್ತ ಸೈನಿಕ ಜಿನೀಶ್ ಟಿ. ಕೋಡಿಂಬಾಳ ಅವರು ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ಹೋರಾಟದ ಮಹತ್ವ ಹಾಗೂ ಸೈನಿಕರ ತ್ಯಾಗವನ್ನು ಸ್ಮರಿಸಿ, ದೇಶದ ಪ್ರಗತಿಗಾಗಿ ಪ್ರತಿಯೊಬ್ಬರೂ ತಮ್ಮ ವಲಯದಲ್ಲಿ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿ, ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಸಾದ್ ಗೌಡ, ಉದ್ಯಮಿಗಳಾದ ರಾಕೇಶ್ ಚೌದರಿ, ಅಶೋಕ್ ರೈ, ಆದಂ ಕುಂಡೋಳಿ, ಸಂಘದ ಹಿರಿಯ ಸದಸ್ಯ ಚೆನ್ನಪ್ಪ ಗೌಡ ಹಾಗೂ ಪದಾಧಿಕಾರಿಗಳು ಹಾಗೂ ಅನೇಕ ಆಟೋ ಮಾಲಕರು-ಚಾಲಕರು ಹಾಜರಿದ್ದರು.ಧ್ವಜಾರೋಹಣ ನಂತರ ರಾಷ್ಟ್ರಗೀತೆ ಗಾಯನ, ಸಿಹಿ ವಿತರಣೆ ನಡೆಯಿತು.