Kadaba:ನಾಡಪ್ರಭು ಕೆಂಪೇಗೌಡರ ಆದರ್ಶಗಳು ವಿದ್ಯಾರ್ಥಿಗಳಿಗೆ ಪೂರಕವಾಗಬೇಕು. ಚೇತನ್ ಆನೆಗುಂಡಿ

ಕಡಬ

ಕೆಂಪೇಗೌಡರ ಜೀವನವನ್ನು ಪಠ್ಯ ಪುಸ್ತಕದಲ್ಲಿ ಪ್ರಥಮ ಭಾಗವಾಗಿ ಮಾಡಲಾಗಿಲ್ಲ.ಆದರೂ ಸರಕಾರ ಇದೀಗ ಸರಕಾರಿ ಆಡಳಿತದ ಮೂಲಕ ಕೆಂಪೇಗೌಡರ ಜಯಂತಿಯನ್ನು ಆಚರಣೆ ಮಾಡುತ್ತಿರುವುದು ಸಂತೋಷದ ವಿಚಾರ.ಕೆಂಪೇಗೌಡರು ತಾನು ಬದುಕಿದ್ದ 60ವರ್ಷಗಳಲ್ಲಿ ಮಾಡಿದ ಸಾಧನೆ ಅವರ್ಣನೀಯ.ಸಮಾಜದ ಬಗ್ಗೆ ಸೂಕ್ಷ್ಮ ಕಾಳಜಿಯನ್ನು  ಅವರು ಹೊಂದಿದ್ದರು. ಎಂದು ಸಂತ ಜಾರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿ ಇಲ್ಲಿನ ಉಪನ್ಯಾಸಕರಾದ ಚೇತನ್ ಆನೆಗುಂಡಿ ಅವರು ಹೇಳಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಡಬ ತಾಲೂಕು ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಉಪನ್ಯಾಸವನ್ನು ನೀಡಿದರು. ಕೆಂಪೇಗೌಡರ ಜೀವನ ಚರಿತ್ರೆ, ಅವರ ಹೋರಾಟದ ಹಾದಿ,ಮಾಡಿದ ಸಾಧನೆಗಳ ಬಗ್ಗೆ, ರಾಜ್ಯದ ರಾಜಧಾನಿ ಬೆಂಗಳೂರು ಸ್ಥಾಪನೆ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಕಡಬ ತಾಲೂಕು ತಹಶಿಲ್ದಾರರಾದ ಪ್ರಭಾಕರ ಖಜೂರೆ ಅವರು ದೀಪ ಬೆಳಗಿಸಿ ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಉದ್ಗಾಟಿಸಿದರು.

ಕೆಂಪೇಗೌಡ ಅವರ ಸ್ಮರಣಾರ್ಥ ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ನಡೆದ ವಿವಿಧ ಸ್ತರದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಈ ಸಮಯದಲ್ಲಿ ನಡೆಯಿತು. ಕಡಬ ಪ್ರೌಢ ಶಾಲೆ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನೆರವೇರಿಸಿ, ಉಪ ತಹಶಿಲ್ದಾರರಾದ ಗೋಪಾಲ್ ಅವರು ಸ್ವಾಗತಿಸಿದರು. ವೇದಿಕೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸೈಯದ್ ಮೀರಾ ಸಾಹೇಬ್, ಮುಖ್ಯ ಗುರುಗಳಾದ ಡಾ.ವೇದಾವತಿ,ನಿವೃತ್ತ ಶಿಕ್ಷಕ ಜನಾರ್ದನ ಗೌಡ ಪಣೆಮಜಲ್,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಮೆಸ್ಕಾಂ ಅಧಿಕಾರಿ ಸತ್ಯನಾರಾಯಣ, ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾದ ಸುರೇಶ್ ಬೈಲು,ತಾಲೂಕು ಪಂಚಾಯತ್ ಅಧಿಕಾರಿ ಸಂದೇಶ್,ಕಡಬ ಸರಕಾರಿ ಕಾಲೇಜು ಪ್ರಾಂಶುಪಾಲರಾದ ದೇವರಾಜ್, ಅಶ್ರಫ್ ಶೇಡಿಗುಂಡಿ ಸೇರಿದಂತೆ ಕಡಬ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಸಿಬ್ಬಂದಿ ಉದಯಕುಮಾರ್ ಅವರು ವಂದಿಸಿದರು.