VITLA: ಕೆ.ಎಸ್.ಆರ್.ಟಿ.ಸಿ ಬಳಿ ಇದ್ದ ರಿಕ್ಷಾ ಪಾರ್ಕಿಂಗ್ ತೆರವು, ರಿಕ್ಷಾ ಚಾಲಕರಿಂದ ಶಾಸಕರಿಗೆ ದೂರು

ವಿಟ್ಲ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇದ್ದ ರಿಕ್ಷಾ ಪಾರ್ಕಿಂಗನ್ನು ತೆರವು ಮಾಡುವಂತೆ ಕೆಎಸ್ಆರ್ಟಿಸಿ ಸೂಚನೆ ನೀಡಿದ್ದು ಇದರ ವಿರುದ್ದ ರಿಕ್ಷಾ ಚಾಲಕರು ಶಾಸಕ ಅಶೋಕ್ ರೈ ಅವರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ದೂರು‌ ನೀಡಿರುವ ರಿಕ್ಷಾ ಚಾಲಕರು‌ ನಾವು ಕಳೆದ ಹಲವು ವರ್ಷಗಳಿಂದ ನಾವು ಈ ಪ್ತದೇಶದಲ್ಲಿ ರಿಕ್ಷಾ ಪಾರ್ಕಿಂಗ್ ಮಾಡುತ್ತಿದ್ದು ಕೆಎಸ್ ಆರ್ ಟಿ ಸಿ ಅಧಿಕಾರಿಗಳು ನಮ್ಮ ಪಾರ್ಕಿಂಗನ್ನು ತೆರವು ಮಾಡಿದ್ದಾರೆ. ಇದರಿಂದ ನಮ್ಮ ಆದಾಯಕ್ಕೆ ತೊಂದರೆಯಾಗಿದ್ದು ಅಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿದ ಶಾಸಕರು ಅಲ್ಲಿ ಈ ಹಿಂದೆ ಇದ್ದ ಪಾರ್ಕಿಂಗ್ ನ್ನು ತೆರವು‌ ಮಾಡದಂತೆ ಸೂಚಿಸಿದ್ದಾರೆ.