UDUPI ಉಡುಪಿ ಪತ್ರಕರ್ತರ ಗ್ರಂಥಾಲಯಕ್ಕೆ ಪುಸ್ತಕ ದಾನ ಮಾಡಲು ಮನವಿ - ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ

ಉಡುಪಿ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಾಗಿರುವ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಉಡುಪಿ ಪತ್ರಿಕಾ ಭವನದಲ್ಲಿ ಗ್ರಂಥಾಲಯ ಸ್ಥಾಪನೆ ಕೂಡ ಒಂದು. ಅದರಂತೆ ಗ್ರಂಥಾಲಯ ಸ್ಥಾಪನೆಗೆ ಇದೀಗ ಕಾಲ ಕೂಡಿ ಬಂದಿದ್ದು, ಇದಕ್ಕೆ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಮ್ಮ ಸಂಘದ ಜೊತೆ ಕೈಜೋಡಿಸಿದೆ.

ಸದ್ಯಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತಕರ ಸಂಘದಿಂದ ಸಣ್ಣ ಮಟ್ಟದಲ್ಲಿ ಗ್ರಂಥಾಲಯ ಆರಂಭಿಸುವ ಚಿಂತನೆ ಮಾಡಲಾಗಿದ್ದು, ಮುಂದೆ ಪ್ರತಿಕಾ ಭವನದ ಮೇಲಂತಸ್ತು ಪೂರ್ಣಗೊಂಡ ಬಳಿಕ ಸುಸಜ್ಜಿತ ಗ್ರಂಥಾಲಯ ಸ್ಥಾಪಿಸಬೇಕೆಂಬುದು ನಮ್ಮ ಉದ್ದೇಶವಾಗಿದೆ.

ಈ ಗ್ರಂಥಾಲಯವು ಕೇವಲ ಪತ್ರಕರ್ತರಿಗೆ ಮಾತ್ರವಲ್ಲದೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ಅಧ್ಯಯನ ಕೇಂದ್ರವಾಗಿರಬೇಕೆಂಬುದು ಕೂಡ ನಮ್ಮ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಈ ಗ್ರಂಥಾಲಯದಲ್ಲಿ ಪತ್ರಿಕೋದ್ಯಮ ಹಾಗೂ ಉಡುಪಿ ಜಿಲ್ಲೆಯ ಇತಿಹಾಸ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳಿಗೆ ಆದ್ಯತೆ ನೀಡಲಾಗುತ್ತದೆ. 

ಆದುದರಿಂದ ತಮ್ಮಲ್ಲಿರುವ ಪತ್ರಿಕೋದ್ಯಮ ಹಾಗೂ ಉಡುಪಿ ಜಿಲ್ಲೆಯ ಇತಿಹಾಸ, ಪರಿಸರ, ಸಂಸ್ಕೃತಿ ಸೇರಿದಂತೆ ವಿವಿಧ ವಿಚಾರಗಳ ಕುರಿತ ಪುಸ್ತಕಗಳಿದ್ದರೆ ನಮ್ಮ ಈ ಗ್ರಂಥಾಲಯಕ್ಕೆ ದಾನ ಮಾಡಬಹುದಾಗಿದೆ. 

ಆ ಪುಸ್ತಕಗಳನ್ನು ಜೋಪಾನವಾಗಿ ಕಾಪಾಡುವುದು ಮತ್ತು ಸದಪಯೋಗ ಆಗುವಂತೆ ಮಾಡುವುದು ನಮ್ಮ ಕರ್ತವ್ಯವಾಗಿರುತ್ತದೆ. ಆದುದರಿಂದ ತಮ್ಮಲ್ಲಿ ಪುಸ್ತಕಗಳಿದ್ದರೆ ಮತ್ತು ಅದನ್ನು ಈ ಗ್ರಂಥಾಲಯಕ್ಕೆ ನೀಡಲು ಇಚ್ಛಿಸಿದರೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ( ಮೊ- 9448501020) ಅಥವಾ ಕಸಾಪ ಉಡುಪಿ ತಾಲೂಕು ಗೌರವ  ಕಾರ್ಯದರ್ಶಿ ಜನಾರ್ದನ ಕೊಡವೂರು(ಮೊ- 9448252363 ) ಅವರನ್ನು ಸಂಪರ್ಕಿಸಬಹುದು.