ಹಿರಿಯರಾದ ಸುಮತಿಯಮ್ಮನವರು ಆಟಿಯ ವೈಶಿಷ್ಟ್ಯ, ಆಟಿ ಅಮಾವಾಸ್ಯೆಯ ಕಷಾಯದ ವಿಶೇಷತೆಯನ್ನು ಸವಿವರವಾಗಿ ತಿಳಿಸಿದರು... ಮಾತೆಯರು ಆ ಕಾಲದ ಕಷ್ಟದ ದಿನಗಳನ್ನು ಇಂದಿನ ಪೀಳಿಗೆ ತಿಳಿಸುತ್ತಾ ಮಕ್ಕಳಿಗೆ ಪೊಕ್ಕಾಟ, ಜುಬಿಲಿ, ಚನ್ನೆಮಣೆ ಆಟವನ್ನು ಹೇಳಿಕೊಟ್ಟರು. ತಾವೇ ತಯಾರಿಸಿದ ಅಂದಿನ ಕಾಲದ 33 ಬಗೆಯ ತಿನಿಸುಗಳ ಪರಿಚಯದ ಜೊತೆಗೆ ಅದರಲ್ಲಿ ಅಡಗಿರುವ ಆರೋಗ್ಯ ಮಾಹಿತಿಯನ್ನು ನೀಡಿದರು.
ಸುಮನಸಾದ ಅಧ್ಯಕ್ಷರಾದ ಪ್ರಕಾಶ್ ಜಿ. ಕೊಡವೂರು ಮಾತನಾಡುತ್ತಾ ಪ್ರತೀವರ್ಷ ನೀವೇ ತಿಂಡಿತಿನಸುಗಳನ್ನು ತಯಾರಿಸಿ ಕಾರ್ಯಕ್ರಮ ಆಯೋಜಿಸುವ ನಿಮಗೆ ಕೃತಜ್ಞತೆಗಳು. ಮಕ್ಕಳನ್ನು ಮೊಬೈಲ್ ಗುಂಗಿನಿಂದ ದೂರವಿರಿಸಲು ಇಂತಹ ಒಳಾಂಗಣ ಆಟಗಳು ಪೂರಕ ಎಂಬ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಸುಮನಸಾ ಸಂಚಾಲಕರಾದ ಭಾಸ್ಕರ್ ಪಾಲನ್ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.
ವಿದ್ಯಾದಾಯಿನಿ, ಸಂಧ್ಯಾ ಪ್ರಕಾಶ್, ಗೀತಾ ಹರೀಶ್ ಇವರ ಪಾಡ್ದನದೊಂದಿಗೆ ಕಾರ್ಯಕ್ರಮ ಆರಂಭಗೊಂಡು ವಿಜಯ ಭಾಸ್ಕರ್ ಎಲ್ಲರನ್ನೂ ಸ್ವಾಗತಿಸಿದರು. ಪ್ರಿಯಾ ಪ್ರವೀಣ್ ಧನ್ಯವಾದ ನೀಡಿ ಶೋಭಾ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು..
Social Icons