UDUPI ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಮಳೆ ಸಾಧ್ಯತೆ

ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನ - ರಾತ್ರಿ  ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ.  ಬಂಗಾಳ ಕೊಲ್ಲಿಯಲ್ಲಿ ನಿನ್ನೆಯಿಂದ ಲೋ ಪ್ರೆಶರ್ ಆಗಿ ಹವೆ ಬದಲಾಗಿದ್ದು ಇದರ ಪರಿಣಾಮ ಇವತ್ತು ಕಾಸರಗೋಡು ದ ಕ  ಉಡುಪಿ ಉ.ಕ  ಜಿಲ್ಲೆಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಬಹುದು.

ಕೊಡಗು ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುನ್ಸೂಚನೆ ಇದೆ ಹಾಸನ ಜಿಲ್ಲೆಯ ಕರಾವಳಿ ಗಡಿ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದ್ದರೂ ಉಳಿದ ಪ್ರದೇಶಗಳಲ್ಲಿ ಮೋಡದ ವಾತಾವರಣ ಮುಂದುವರಿಯಬಹುದು

ದಕ್ಷಿಣ ಒಳನಾಡಿನ ಮೈಸೂರು ಮಂಡ್ಯ ಚಾಮರಾಜನಗರ ರಾಮನಗರ ತುಮಕೂರು ಬೆಂಗಳೂರು ಗ್ರಾಮಾಂತರ ಕೋಲಾರ ಚಿಕ್ಕಬಳ್ಳಾಪುರ  ಹಾವೇರಿ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ  ಸಂಜೆ ಒಂದೆರಡು ಮಳೆ ಮುನ್ಸೂಚನೆ ಇದೆ.

ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುನ್ಸೂಚನೆ ಇದೆ.  ಗದಗ ಬೀದರ್ ಕಲ್ಬುರ್ಗಿ ಯಾದಗಿರಿ ರಾಯಚೂರು ಜಿಲ್ಲೆಗಳ ಕೆಲವೆಡೆ ಗುಡುಗು ಮಳೆ ಸಾಧ್ಯತೆ ಇದೆ.

ಗುಜರಾತ್ - ಪಾಕ್ ಗಡಿಪ್ರದೇಶದಲ್ಲಿ ಕೇಂದ್ರೀಕೃತವಾಗಿರುವ ಶನಿವಾರ ಅರಬ್ಬೀ ಸಮುದ್ರ ಪ್ರವೇಶಿಸಲಿದ್ದು ಪಶ್ಚಿಮದತ್ತ ಸಾಗಬಹುದು.   ಬಂಗಾಳ ಕೊಲ್ಲಿಯ ವಾಯುಭಾರ ಕುಸಿತವು  ಸೆ 1ರಂದು ವಿಶಾಖಪಟ್ಟಣ ಮೂಲಕ ಭೂಭಾಗ ಪ್ರವೇಶಿಸಿ ಮಧ್ಯ ಭಾರತದತ್ತ ಮುಂದುವರಿಯುವ ಸಾಧ್ಯತೆಗಳಿದ್ದು ಉತ್ತರ ಭಾರತದಲ್ಲಿ ಮತ್ತೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ .  

ವಾಯುಭಾರ ಕುಸಿತದ  ಪರಿಣಾಮ ಕರಾವಳಿ ಮಲೆನಾಡು ದ. ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗಬಹುದು.   ಸೆಪ್ಟೆಂಬರ್ ಮೊದಲ ವಾರ ಸಾಧಾರಣ ಮಳೆ ಮುಂದುವರೆಯುವ ಸಾಧ್ಯತೆಗಳಿವೆ .