UDUPI ಶ್ರಾವಣದ ಹುಣ್ಣಿಮೆ ಸೂಪರ್ಮೂನ್ ವೈಭವ

ಇಂದು ಸೋಮವಾರ ಶ್ರವಣ ನಕ್ಷತ್ರದಲ್ಲಿ ಹುಣ್ಣಿಮೆ. ಈ ದಿನ ಸೂಪರ್ ಮೂನ್.
ಈ ಹುಣ್ಣಿಮೆಯಿಂದ ಮುಂದಿನ ಭಾದ್ರಪದ, ಆಶ್ವೀಜ, ಹಾಗೂ ಕಾರ್ತೀಕಗಳ ನಾಲ್ಕು ಹುಣ್ಣಿಮೆಗಳೂ ಸೂಪರ್ಮೂನ್ ಗಳೇ.

ಸೂಪರ್ಮೂನ್ ಎಂದರೆ ಹುಣ್ಣಿಮೆಯಂದು ಚಂದ್ರ ಭೂಮಿಗೆ ಸುಮಾರು ಮೂವತ್ತು ಸಾವಿರ ಕಿಮೀ ಸಮೀಪ ಬರುವುದು. ಭೂಮಿಯಿಂದ ಸರಾಸರಿ 3ಲಕ್ಷದ 84 ಸಾವಿರ ಕಿಮೀ ದೂರದಲ್ಲಿ ದೀರ್ಘವೃತ್ಾಕಾರದಲ್ಲಿ ಸುತ್ತುವ ಚಂದ್ರ , 28 ದಿನಗಳಿಗೊಮ್ಮೆ 3 ಲಕ್ಷದ 56 ಸಾವಿರದವರೆಗೂ ಹತ್ತಿರ ಬರುವುದುಂಟು. ಆ ದಿನ ಹುಣ್ಣಿಮೆಯಾದರೆ, ಭೂಮಿಗೆ ಹತ್ತಿರ ಬಂದ ಚಂದ್ರ , ಸುಮಾರು 14 ಅಂಶ ದೊಡ್ಡದಾಗಿ ಕಂಡು , ಸುಮಾರು 24ಅಂಶ ಹೆಚ್ಚಿನ ಪ್ರಭೆಯಿಂದ ಬೆಳಗುತ್ತಾನೆ.
ವರ್ಷದಲ್ಲಿ ಕೆಲ ಹುಣ್ಣಿಮೆಗಳು ಸೂಪರ್ ಮೂನ್ ಆಗುವದುಂಟು.  ಆದರೆ ಈ ವರ್ಷ ಈ ಹುಣ್ಣಿಮೆಯಿಂದ ಸರಾಗ ನಾಲ್ಕೂ ಹುಣ್ಣಿಮೆಗಳೂ ಸೂಪರ್ಮೂನ್ ಗಳೇ. 

ಆಗಸ್ಟ್ 19 ರಂದು 3 ಲಕ್ಷದ 61 ಸಾವಿರದ 969 ಕಿಮೀ ಯಾದರೆ,  ಸಪ್ಟಂಬರ್ 18 ರಂದು 3 ಲಕ್ಷದ 57 ಸಾವಿರದ 485, ಅಕ್ಟೋಬರ್    17 ರಂದು 3 ಲಕ್ಷದ 57 ಸಾವಿರದ 363 ಕಿಮೀ ಹಾಗೂ ನವಂಬರ್ 15 ರಂದು 3 ಲಕ್ಷದ 61 ಸಾವಿರದ 866ಕಿಮೀ.
ಹುಣ್ಣಿಮೆಯೇ ಚೆಂದ. ಅದೂ ಸೂಪರ್ ಮೂನ್ ಬಲು ಚೆಂದ. 

ಬರಹ : ಡಾ ಎ ಪಿ ಭಟ್ ಉಡುಪಿ.