UDUPI ಉಡುಪಿ ಶ್ರೀಕೃಷ್ಣ ಮಾಸೋತ್ಸವದ ಅಂಗವಾಗಿ ಅಗಸ್ಟ್ 1ರಿಂದ 11 ರ ವರೆಗೆ ಕೈಮಗ್ಗ ಸೀರೆ, ಬಟ್ಟೆ ಪ್ರದರ್ಶನ ಮತ್ತು ಮಾರಾಟ

ಉಡುಪಿ : ಪೊಡವಿಗೊಡಯ ಶ್ರೀ ಕೃಷ್ಣನ ಸನ್ನಿಧಿ ಉಡುಪಿಯಲ್ಲಿ ಆಗಸ್ಟ್ 1ರಿಂದ ಸೆಪ್ಟೆಂಬರ್ 1ರ ವರೆಗೆ ವೈಭವದ ಕೃಷ್ಣ ಜನ್ಮ ದಿನೋತ್ಸವ ಸಂಭ್ರಮದಿಂದ ನಡೆಯಲಿದೆ.

ಇದರ ಮೊದಲ ಭಾಗವಾಗಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ
ಇವರ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾಸಂಘ ಉಡುಪಿ ಇವರ ಆಯೋಜನೆಯಲ್ಲಿ 
ಶ್ರೀಕೃಷ್ಣ ಮಾಸೋತ್ಸವದ ಅಂಗವಾಗಿ ಅಗಸ್ಟ್ 11 ರ ವರೆಗೆ ಕೈಮಗ್ಗ ಸೀರೆ ಮತ್ತು ಬಟ್ಟೆ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಪರಮಪೂಜ್ಯ ಪರ್ಯಾಯ ಶ್ರೀಪಾದರು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟಿಸಿದರು.

 ಇದೇ ಸಂದರ್ಭದಲ್ಲಿ  ಆಗಸ್ಟ್ 1 ರಿಂದ 11 ರ ವರೆಗೆ  ಪದ್ಮಶಾಲಿ ನೇಕಾರ ಪ್ರತಿಸ್ಥಾನ , ಶ್ರೀ ಕೃಷ್ಣ ಲೀಲೋತ್ಸವ ಎಂಬ ಹಲವಾರು  ಕಾರ್ಯಕ್ರಮ ನಡೆಸಿಕೊಡುತ್ತಿದೆ.  ಪದ್ಮ ಶಾಲಿಗಳು ಮಾಡುವುದು ಇದೊಂದು ಶ್ರೀ ಕೃಷ್ಣನ ಸೇವೆ ಎಂದು ಸ್ವಾಮೀಜಿ ಗಳು ನುಡಿದರು. ಮೊದಲ ಬಾರಿ ಈ ರೀತಿಯ ಕಾರ್ಯಕ್ರಮ  ಉಡುಪಿ ರಾಜಾಂಗಣದಲ್ಲಿ ನಡೆಯುತ್ತಿದ್ದು, ಪದ್ಮ ಶಾಲಿ ಗಳು ಶ್ರೀ ಕೃಷ್ಣ ಕೃಪೆಗೆ ಪಾತ್ರ ರಾಗಿದ್ದೀರಿ.  ನಮಗೂ ಬಹಳ ಸಂತೋಷವಾಗಿದೆ, ನಿಮ್ಮ ಎಲ್ಲಾ ಉದ್ದೇಶ ಗಳು ಫಲಕಾರಿ ಯಾಗಲಿ ಭಗವಂತ ಅನುಗ್ರಹಿಸಲಿ  ಎಂದು ಆಶೀರ್ವಾದ ನೀಡಿದರು. 
            
ಮುಖ್ಯ ಅತಿಥಿ ಗಳಾಗಿ  ರಾಯಪ್ಪ  ಉಡುಪಿ  ನಗರ ಸಭೆಯ ಆಯುಕ್ತರು, ಶ್ರೀ ಜಗದೀಶ್ ಶೆಟ್ಟಿಗಾರ್ ಆತ್ರಾಡಿ, ಮಾಜಿ ಪ್ರಧಾನಮಂತ್ರಿಗಳ ಆರ್ಥಿಕ ಸಲಹೆಗಾರರು, ಶ್ರೀ ಪ್ರಭಾಕರ ನಾಯಕ್ ಅಮ್ಮುಂಜೆ, ಅಧ್ಯಕ್ಷರು, ಛೇಂಬ‌ರ್ ಆಫ್ ಕಾಮರ್ಸ್, ಉಡುಪಿ ಶ್ರೀ ಕಿಶೋರ್ ಕುಮಾರ್, ಉದ್ಯಮಿ, ಕುಂದಾಪುರ,
ಶ್ರೀ ಪುರುಷೋತ್ತಮ ಶೆಟ್ಟಿ, ಉದ್ಯಮಿ, ಉಡುಪಿ ಶ್ರೀ ಗಣೇಶ್ ಪಾಟೀಲ್, ಪಾಟೀಲ್ ಸ್ಟೋರ್ಸ್, ಪರ್ಕಳ ಶ್ರೀ ಹರಿಯಪ್ಪ ಕೋಟ್ಯಾನ್, ಉದ್ಯಮಿ, ಮಲ್ಪೆ  ಮತ್ತು  ಡಾ ಚಂದನ್ ಶೆಟ್ಟಿಗಾರ್, ಇಂದ್ರಾಳಿ ರತ್ನಾಕರ ಶೆಟ್ಟಿಗಾರ್ ಮತ್ತು ಪದ್ಮಶಾಲಿ ಪ್ರತಿಷ್ಠಾನದ ಪದಾಧಿಕಾರಿಗಳು ಸದಸ್ಯರು ಮತ್ತು ಪದ್ಮ ಶಾಲಿ ಸಮಾಜದ ನೂರಾರು ಸದಸ್ಯರು  ಭಾಗವಹಿಸಿದರು.