ಗರ್ಭಿಣಿಯರಿಗೆ ತಾಯಿ ಕಾರ್ಡ್ ನೋಂದಣಿ ಕಡ್ಡಾಯ: ಆರೋಗ್ಯ ಮತ್ತು ಕುಟುಂಬ ಇಲಾಖೆ ಪ್ರಕಟಣೆ

ಗರ್ಭಿಣಿಯರಿಗೆ ತಾಯಿ ಕಾರ್ಡ್ ನೋಂದಣಿ ಕಡ್ಡಾಯ: ಆರೋಗ್ಯ ಮತ್ತು ಕುಟುಂಬ ಇಲಾಖೆ ಪ್ರಕಟಣೆ




ರಾಜ್ಯದ ಎಲ್ಲ ಜಿಲ್ಲೆಯ ಪ್ರತಿಯೊಬ್ಬ ಗರ್ಭಿಣಿಯರು ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟು ತಾಯಿ ಕಾರ್ಡ್ ಪಡೆದು ಆರ್.ಸಿ.ಹೆಚ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.


ತಪಾಸಣೆ ಮತ್ತು ಸ್ಕ್ಯಾನಿಂಗ್‌ಗೆ ಒಳಪಡಲು ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಹೋಗುವಾಗ ತಾಯಿಕಾರ್ಡ್‌ನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಆರೋಗ್ಯ ಸಂಸ್ಥೆಗಳು ತಪಾಸಣೆಗೆ ಒಳಪಟ್ಟ ವಿವರಗಳನ್ನು ತಾಯಿಕಾರ್ಡ್ನಲ್ಲಿ ನಮೂದಿಸಬೇಕು.


ಗರ್ಭಿಣಿಯರಿಗೆ ಎಂ.ಟಿ.ಪಿ ನೀಡುವ ಖಾಸಗಿ ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್ ಹೋಮ್‌ನವರು ಇ-ಕಲ್ಯಾಣಿ ಸಾಫ್ಟ್ವೇರ್‌ನಲ್ಲಿ ಕಡ್ಡಾಯವಾಗಿ ಎಂ.ಟಿ.ಪಿ ಕಾಯ್ದೆ ಹಾಗೂ ಪಿ.ಸಿ.ಪಿ.ಎನ್.ಡಿ.ಟಿ ಕಾನೂನಿನಡಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.