ನವದೆಹಲಿ: ಮಾವಿನಹಣ್ಣಿಗಾಗಿ ಬರೋಬ್ಬರಿ 40 ವರ್ಷಗಳ ಹಿಂದೆ ನಡೆದಿರು ಜಗಳದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಸಂಬಂಧಿಸಿ ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಆದರೆ ಈ ಕೊಲೆ ಉದ್ದೇಶವಲ್ಲದ ಹಲ್ಲೆ ಪ್ರಕರಣವಾಗಿ ಪರಿವರ್ತಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಈ ಪ್ರಕರಣದಲ್ಲಿ ಮನ್ ಬಹದ್ದೂರ್ ಸಿಂಗ್, ಭರತ್ ಸಿಂಗ್, ಭಾನುಪ್ರತಾಪ್ ಅವರಿಗೆ ಜೀವಾವಧಿ ಸಜೆ ವಿಧಿಸಲಾಗಿತ್ತು. ಅದರ ಬದಲಾಗಿ ಏಳು ವರ್ಷಗಳ ಸೆರೆ ಹಾಗೂ 25ಸಾವಿರ ದಂಡ ವಿಧಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ದಂಡದ ಒಟ್ಟು ಮೊತ್ತವನ್ನು ಮೃತನ ಕುಟುಂಬದವರಿಗೆ ನೀಡಬೇಕೆಂದು ಕೋರ್ಟ್ ಸೂಚಿಸಿದೆ.
1984ರ ಎಪ್ರಿಲ್ 19ರಂದು ಎರಡು ಕುಟುಂಬಗಳಿಗೆ ಸೇರಿದ್ದ ನಾಲ್ವರು ಬಾಲಕರ ನಡುವೆ ಜಗಳವಾಗಿದೆ. ಜಗಳದಲ್ಲಿ ಭಾಗಿಯಾಗಿದ್ದ ಬಾಲಕ ಡಬ್ಬುವಿನ ತಂದೆ ವಿಶ್ವನಾಥ್ ಸಿಂಗ್ ಮೇಲೆ ಹಲ್ಲೆ ನಡೆದಿತ್ತು. ಐವರು ಲಾಠಿಯಿಂದ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಎಫ್ಐಆರ್ ದಾಖಲಾಗಿತ್ತು. ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ವಿಚಾರಣೆಯಲ್ಲಿ ಇರುವಾಗಲೇ ಇಬ್ಬರು ಆರೋಪಿಗಳು ಮೃತಪಟ್ಟಿದ್ದರು.
ಸಾಕ್ಷಿಗಳ ಹೇಳಿಕಸಯೆ ಗಮನಿಸಿದರೆ, ಈ ಕೊಲೆಯು ಪೂರ್ವನಿಯೋಜಿತವಲ್ಲ. ಮಾವಿನ ಹಣ್ಣಿಗಾಗಿ ಮಕ್ಕಳ ನಡುವೆ ಜಗಳ ಆರಂಭವಾಗಿದೆ. ನಂತರ ಜಗಳದಲ್ಲಿ ಹಿರಿಯರೂ ಸೇರಿದ್ದಾರೆ. ಅಂತಿಮವಾಗಿ ವಯಸ್ಕರೊಬ್ಬರ ಸಾವಿನಲ್ಲಿ ಜಗಳ ಅಂತ್ಯವಾಗಿದೆ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
.jpeg)
Social Icons