ಬೆಂಗಳೂರು: ಕೊಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಆಕ್ರೋಶ್ ವ್ಯಕ್ತವಾಗುತ್ತಿರುವ ನಡುವೆಯೇ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ನೀಚ ಕೃತ್ಯ ನಡೆದಿದೆ. ಸ್ನೇಹಿತರೊಂದಿಗೆ ನೈಟ್ ಪಾರ್ಟಿ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಕಾಮುಕನೋರ್ವ ಅತ್ಯಾಚಾರ ನಡೆಸಿ ಪರಾರಿಯಾಗಿದ್ದಾನೆ. ಸದ್ಯ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಂಗಳೂರಿನ ಕೋರಮಂಗಲದಲ್ಲಿ ಸ್ನೇಹಿತರೊಂದಿಗೆ ಯುವತಿ ಗೆಟ್ ಟುಗೆದರ್ ಪಾರ್ಟಿಯಲ್ಲಿ ಭಾಗಿಯಾಗಿದ್ದಳು. ಮಧ್ಯರಾತ್ರಿ ಪಾರ್ಟಿ ಮುಗಿಸಿ ಸ್ನೇಹಿತರೊಂದಿಗೆ ಕಾರಿನಲ್ಲಿ ಮನೆಗೆ ಹೊರಟಿದ್ದಳು. ಆದರೆ ರಾತ್ರಿ 1:30ರ ಸುಮಾರಿಗೆ ಇವರು ಬರುತ್ತಿದ್ದ ಕಾರಿಗೆ ಆಟೋ ಟಚ್ ಆಗಿದ್ದು, ಸ್ಥಳದಲ್ಲಿ ಸ್ನೇಹಿತರು ಹಾಗೂ ಆಟೋ ಚಾಲಕನ ನಡುವೆ ಗಲಾಟೆಯಾಗಿದೆ.
ಈ ವೇಳೆ ಆತಂಕಗೊಂಡ ಯುವತಿ ಅಪರಿಚಿತನ ಬೈಕ್‌ನಲ್ಲಿ ಡ್ರಾಪ್ ಪಡೆದುಕೊಂಡಿದ್ದಾಳೆ. ಇದೇ ಸಂದರ್ಭವನ್ನು ಬಳಸಿಕೊಂಡಿ ಕಾಮುಕ ಆಕೆಯನ್ನು ಬೈಕ್‌ನಲ್ಲಿ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಯುವತಿ ತನ್ನ ಮೊಬೈಲ್‌ನಲ್ಲಿ ಎಮರ್ಜೆನ್ಸಿ ನಂಬರ್‌ಗಳಾಗಿ ತಂದೆ, ಸ್ನೇಹಿತೆ ನಂಬರ್ ಸೇವ್ ಮಾಡಿಕೊಂಡಿದ್ದಾಳೆ. ಮೊಬೈಲ್ ಸ್ವಿಚ್ ಆದಾಗ ಲೋಕೇಷನ್ ಸಮೇತ ಕರೆ ಹೋಗಿದೆ. ತಕ್ಷಣ ಯುವತಿಯ ತಂದೆ, ಸ್ನೇಹಿತರು ಸ್ಥಳಕ್ಕೆ ಬಂದಾಗ ಅರೆನಗ್ನವಾಗಿ ಶೋಚನೀಯ ಸ್ಥಿತಿಯಲ್ಲಿ ಸಂತ್ರಸ್ತೆ ಪತ್ತೆಯಾಗಿದ್ದಾಳೆ. ಕಾರಿನ ಟಾರ್ಪಲ್ ಅನ್ನು ಯುವತಿಗೆ ಸುತ್ತಿ ಆಕೆಯನ್ನು ಆಸ್ಪತ್ರೆಗೆ ಕರೆತರಲಾಗಿದೆ. ಸಂತ್ರಸ್ತೆ ಯುವತಿಗೆ ಸದ್ಯ ಮೆಡಿಕಲ್ ಟೆಸ್ಟ್ ನಡೆಸಲಾಗಿದ್ದು, ಆರೋಪಿ ಪತ್ತೆಗೆ 5 ವಿಶೇಷ ತಂಡಗಳನ್ನು ಪೊಲೀಸರು ರಚನೆ ಮಾಡಲಾಗಿದೆ.
.jpeg)
Social Icons