ವರದಿ: ಹಕೀಂ ಬೋಳಾರ್
ಮದೀನಾ ಮುನವ್ವರ/ ಸೌದಿ ಅರೇಬಿಯಾ: ಸೌದಿ ಅರೇಬಿಯಾದಲ್ಲಿರುವ ಮುಸ್ಲಿಮರ ಪವಿತ್ರ ಕೇಂದ್ರವಾದ ಮದೀನಾ ಮುನವ್ವರದಲ್ಲಿ ಶುಕ್ರವಾರ ಗುಡುಗು ಮಿಂಚಿನಿಂದ ಕೂಡಿದ ಭಾರೀ ಮಳೆಯಾಗಿದೆ. ಅಪರೂಪಕ್ಕೊಮ್ಮೆ ಬರುವ ಮಳೆಯಿಂದಾಗಿ ಜನರು ಸಂತೋಷಭರಿತರಾಗಿದ್ದು, ಮಕ್ಕಳು ಹಿರಿಯರು ಎಲ್ಲರು ಮಳೆಯಲ್ಲಿ ನೆನೆದು ತಮ್ಮ ಪ್ರಾರ್ಥನೆ ಸಲ್ಲಿಸುತ್ತಿದ್ದರು.
ಇನ್ನು ಹರಂ ಪರಿಸರದೊಳಗಿನ ಮ್ಯಾಟ್ ಗಳನ್ನು ಮಳೆಯಿಂದ ಒದ್ದೆಯಾಗದಂತೆ ತೆಗೆಯಲು ಹರಂ ಸಿಬ್ಬಂದಿಗಳು ಹರಸಾಹಸಪಡುತ್ತಿದ್ದರು. ಮಾತ್ರವಲ್ಲ ಹರಂ ಒಳಗೆ ಹಾಗೂ ಹೊರಗಿನ ಮಳೆ ನೀರನ್ನು ಖಾಲಿ ಮಾಡಲು ಸಿಬ್ಬಂದಿಗಳು ಯಶಸ್ವಿಯಾದರು. ಇಶಾ ನಮಾಝ್ ಸಮಯದಿಂದ ರಾತ್ರಿ12 ಗಂಟೆಯವರೆಗೂ ಮಳೆಯಾಗಿದ್ದು, ಹಲವರು ಮಳೆಯಲ್ಲಿ ನೆನದು ಮನೆ ಸೇರಿದರೆ ಕೆಲವರು ಹರಂ ಪರಿಸರದಲ್ಲಿ ಮಳೆ ನೀರಿನಲ್ಲಿ ಒದ್ದೆಯಾಗಿ ಪ್ರಾರ್ಥನೆ ನಡೆಸುತ್ತಿದ್ದರು.
ಮದೀನಾ ಪರಿಸರದಲ್ಲಿ ಮಳೆ ಅಪರೂಪವಾಗಿದ್ದು, ಅನಿರೀಕ್ಷಿತ ಮಳೆಯಿಂದ ಕೆಲ ಕಾಲ ಅಸ್ತವ್ಯಸ್ತ ಉಂಟಾಯಿತು.




Social Icons