ಪುತ್ತೂರಿನ ಬೈಪಾಸ್ ರಸ್ತೆ ಬಪ್ಪಳಿಗೆಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಮುಂಜಾನೆ ವೇಳೆ ಗುಡ್ಡ ಕುಸಿದ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಈ ಹಿನ್ನಲೆ ಯಾವುದೇ ಅಪಾಯ ಉಂಟಾಗಿಲ್ಲ.
ಬೈಪಾಸ್ ರಸ್ತೆಗೆ ಗುಡ್ಡ ಕುಸಿದ ಕಾರಣ ರಸ್ತೆ ಸಂಪೂರ್ಣ ಬಂದ್ ಆಗಿದೆ.
ಮಡಿಕೇರಿ-ಮೈಸೂರುಗೆ ಪ್ರಯಾಣಿಸುವವರು ಬದಲಿ ರಸ್ತೆಯಾಗಿ ಪುತ್ತೂರು ಸಿಟಿ ಒಳಗಡೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಗುಡ್ಡ ಕುಸಿದ ಪರಿಣಾಮ ದೇವಿ ದೇವಸ್ಥಾನ ಹಾಗೂ ಮನೆ ಅಪಾಯದ ಸ್ಥಿತಿಯಲ್ಲಿದೆ.
Social Icons