ಬೆಂಗಳೂರು: ಇತ್ತೀಚೆಗೆ ಪೊಲೀಸರು ನಡೆಸುವ ಕಾರ್ಯಾಚರಣೆ ಯಾವುದೇ ಸಿನಿಮಾ ಸೀನ್ ಗೂ ಕಡಿಮೆ ಇರುವುದಿಲ್ಲ. ಇದೀಗ ಸಿನಿಮೀಯ ಶೈಲಿಯಲ್ಲಿ ನಟೋರಿಯಸ್ ರೌಡಿಯನ್ನು ಪೊಲೀಸ್ ಪೇದೆ ಹಿಡಿದ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದಿದೆ. ಪ್ರಾಣವನ್ನೇ ಪಣಕ್ಕಿಟ್ಟು ಖತರ್ನಾಕ್ ರೌಡಿಯನ್ನ ಪೇದೆಯು ವಶಕ್ಕೆ ಪಡೆದಿದ್ದಾರೆ. ನಟೋರಿಯಸ್ ರೌಡಿಯ ಚೇಸಿಂಗ್ ಮಾಡಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೊರಟಗೆರೆ ಪೊಲೀಸರಿಂದ ನಟೋರಿಯಸ್ ರೌಡಿಯ ಬಂಧನವಾಗಿದೆ. ಸಿಗ್ನಲ್‌ನಲ್ಲಿ ಬೈಕ್‌ನಲ್ಲಿ ಬರುವ ವೇಳೆ ಸಿನಿಮಿಯ ಶೈಲಿಯಲ್ಲಿ ಪೇದೆ ರೌಡಿಯನ್ನ ಬಂಧಿಸಿದ್ದಾರೆ. ಸದ್ಯ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಹೊಟ್ಟೆ ಮಂಜನನ್ನ ಪೊಲೀಸರು ಹಿಡಿದಿದ್ದು, ಬಂಧನದ ವೇಳೆ ಪೇದೆಯ ಮೇಲೆಯೇ ಹೊಟ್ಟೆ ಮಂಜ ಬೈಕ್ ಹತ್ತಿಸಲು ಮುಂದಾಗಿದ್ದಾನೆ. ಸಂಚಾರಿ ಠಾಣೆಯ ಮಹಿಳಾ ಎಸ್ಐ ಮೇಲೆಯೂ ಹೊಟ್ಟೆ ಮಂಜನಿಂದ ಹಲ್ಲೆಯಾಗಿದ್ದು, ಈ ಎಲ್ಲಾ ದೃಶ್ಯಗಳು ಸಿಗ್ನಲ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಕೊರಟಗೆರೆ ಠಾಣೆಯ ದೊಡ್ಡ ಲಿಂಗಯ್ಯ ಎಂಬ ಪೇದೆಯಿಂದ ನಟೋರಿಯಸ್ ರೌಡಿಯ ಕಳ್ಳನ ಬಂಧನವಾಗಿದ್ದು, ಕೊಲೆ ಸುಲಿಗೆ ಡಕಾಯಿತಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ನಟೋರಿಯಸ್ ರೌಡಿ ಹೊಟ್ಟೆ ಮಂಜ ಬೇಕಾಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
Social Icons