PUTTUR: ನಾಪತ್ತೆಯಾಗಿದ್ದ ಯುವಕನ ಮೃತ ದೇಹ ಹೊಳೆಯಲ್ಲಿ ಪತ್ತೆ

ನಾಪತ್ತೆಯಾದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆಯಾದ ಘಟನೆ ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ನಡೆದಿದೆ. 



ಕಡಬ ತಾಲೂಕು ಬಳ್ಪ ಗ್ರಾಮದ ಅಕ್ಕೇಣಿಯ ಅಶೋಕ್ (33 ವ)ಎಂಬ ಯುವಕ  ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ರು..ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು.

ಇದೀಗ  ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಪಂಜ ಹೊಳೆಯ ಪಲ್ಲೋಡಿ ಅಡ್ಕದಲ್ಲಿ ಮೃತ ದೇಹವನ್ನು ಮುಳುಗು ತಜ್ಞರು ಪತ್ತೆ ಹಚ್ಚಿದ್ದಾರೆ.

ಕಾರ್ಯಾಚರಣೆಯಲ್ಲಿ ಸುಳ್ಯದ ಮುಳುಗು ತಜ್ಞರ ತಂಡ ಸಂಪಾಜೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಪ್ರಗತಿ ಅಂಬ್ಯುಲೆನ್ಸ್ ನ ಅಬ್ದುಲ್ ರಜಾಕ್ (ಅಚ್ಚು), ಚಿದಾನಂದ ಗೂನಡ್ಕ , ಶ್ರೀ ಮುತ್ತಪ್ಪನ್ ಅಂಬ್ಯುಲೆನ್ಸ್ ನ ಅಭಿ ಸುಳ್ಯ ಪಾಲ್ಗೊಂಡಿದ್ದರು.ಳ

ಊರವರು , ಸಂಬಂಧಿಕರು ,ನಿಂತರ ಹುಡುಕಾಟ ನಡೆಸಿ, ಸಹಕರಿಸಿರುವುದಾಗಿ ತಿಳಿದು ಬಂದಿದೆ.