ಬಂಟ್ವಾಳ: ಗುಡ್ಡಕುಸಿತದಿಂದ
ಉಂಟಾದ ಹಾನಿಗಳ ಅಧ್ಯಯನ ಹಾಗೂ ಸಂಭವನೀಯ ಅಪಾಯಗಳ ಮುನ್ನೆಚ್ಚರಿಕೆ ಸಲುವಾಗಿ ಜಿಯಾಲಾಜಿಕಲ್ ಸರ್ವೆ
ಆಫ್ ಇಂಡಿಯಾದ ಹಿರಿಯ ಭೂ ವಿಜ್ಞಾನಿಗಳಾದ ಸೆಂಥಿಲ್ ಹಾಗೂ ಸೋವೇಶ್ ಬಂಟ್ವಾಳ ತಾಲೂಕಿನ
ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದರು.
ತುಂಬೆ, ಗೂಡಿನಬಳಿ, ಅಮ್ಮುಂಜೆ ಹಾಗೂ ಕೊಳ್ನಾಡು ಭಾಗಗಳಿಗೆ ಭೇಟಿ ನೀಡಿದ ಅವರು ಸ್ಥಳದಲ್ಲಿ ಸಮಸ್ಯೆ ಉಂಟಾಗುವ ಕಾರಣಗಳ ಕುರಿತು ಗಮನ ಹರಿಸಿದರು.ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ.ಭಟ್, ದ.ಕ.ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಜಯ್‌ಕುಮಾರ್, ಕಿರಿಯ ಎಂಜಿಯರ್ ಯಶವಂತಕುಮಾರ್, ಕಂದಾಯ ನಿರೀಕ್ಷಕರಾದ ಜನಾರ್ದನ ಜೆ, ವಿಜಯ್ ಆರ್, ಗ್ರಾಮಕರಣಿಕ ಕರಿಬಸಪ್ಪ, ಸಿಬಂದಿ ಸದಾಶಿವ ಕೈಕಂಬ ಮೊದಲಾದವರಿದ್ದು, ಪೂರಕ ಮಾಹಿತಿ ನೀಡಿದರು.

Social Icons