BANTWAL: ಧೂಳು, ಹೊಂಡ: ಮೆಲ್ಕಾರ್ ನಲ್ಲಿ ಗುತ್ತಿಗೆ ಕಂಪನಿ ವಾಹನ ತಡೆದು ದಿಢೀರ್ ಪ್ರತಿಭಟನೆ

 

ಬಂಟ್ವಾಳ: ಮೆಲ್ಕಾರ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯುದ್ದಕ್ಕೂ ಹೊಂಡ, ಗುಂಡಿಗಳಿದ್ದು, ಜತೆಗೆ ಧೂಳು ಸೇರಿಕೊಂಡಿದೆ. ಸೋಮವಾರ ಬೆಳಗ್ಗೆ ಧೂಳಿನ ದೈತ್ಯ ಅಲೆಯೇ ಎದ್ದ ಕಾರಣ ಸ್ಥಳಿಯರು ಹೆದ್ದಾರಿ ಕಾಮಗಾರಿ ನಡೆಸುವ ಗುತ್ತಿಗೆ ಕಂಪನಿ ವಾಹನಗಳನ್ನು ತಡೆದು ದಿಢೀರ್ ಪ್ರತಿಭಟನೆ ಮಾಡಿದರು.

ಈ ಸಂದರ್ಭ ಹೆದ್ದಾರಿ ಗುತ್ತಿಗೆ ಕಂಪನಿಯ ಸಿಬಂದಿ ಸ್ಥಳಕ್ಕೆ ಆಗಮಿಸಿ, ಒಂದು ವಾರದೊಳಗೆ ಧೂಳಿನ ಸಮಸ್ಯೆಗೆ ಪರಿಹಾರ ಹಾಗೂ ರಸ್ತೆಯ ದುರಸ್ತಿ ಮಾಡುವುದಾಗಿ ತಿಳಿಸಿದರು.