ವರದಿ : ಹಕೀಂ ಬೋಳಾರ್
ರಿಯಾದ್/ ಸೌದಿ ಅರೇಬಿಯಾ: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಕಮೀಸ್ ಮುಶಾಯಿತ್ ಘಟಕದ ವತಿಯಿಂದ ಸ್ವಲಾತ್ ಮಜ್ಲಿಸ್ ಹಾಗೂ ಮಹಾಸಭೆಯು ಸೌದಿ ಅರೇಬಿಯಾದ ಕಮೀಸ್ ಮುಶಾಯಿತ್ ನಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಅಬ್ದುಲ್ ಖಾದರ್ ಸಖಾಫಿ ಅವರನ್ನು ಅಲ್ ಮದೀನಾ ಕಮೀಸ್ ಘಟಕದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ನಂತರ ಖದರ್ ಸಖಾಫಿ ಅವರು ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ಅಲ್ ಮದೀನಾ ಕಮೀಸ್ ಮುಶಾಯಿತ್ ಘಟಕದ ಉಪಾಧ್ಯಕ್ಷ ಅಬ್ದುಲ್ ರಝಾಕ್ ಬನ್ನೂರು ಅವರು ಮಾತನಾಡಿದರು. ಆ ಬಳಿಕ ನೂತನ ಕಮಿಟಿ ರಚಿಸಲಾಯಿತು.
ಅಲ್ ಮದೀನಾ ಕಮೀಸ್ ಮುಶಾಯಿತ್ ಘಟಕದ ನೂತನ ಕಮಿಟಿ ವಿವರ
ಅಧ್ಯಕ್ಷರು : ಅಬ್ದುಲ್ ಖಾದರ್ ಹಾಜಿ ಸಾಮಣಿಗೆ
ಕಾರ್ಯದರ್ಶಿ : ಹನೀಫ್ ಹಾಜಿ ಮಂಜೇಶ್ವರ
ಖಜಾಂಚಿ : ಫಾರೂಕ್ ಕೆ.ಸಿ.ರೋಡ್
ಉಪಾಧ್ಯಕ್ಷರು: ಅಬ್ದುಲ್ ರಝಾಕ್ ಬನ್ನೂರು, ನಿಯಾಝ್ ಕೆ.ಸಿ.ರೋಡ್, ಮಜೀದ್ ಹಾಜಿ ಮೊಂಟೆಪದವು
ಜೊತೆ ಕಾರ್ಯದರ್ಶಿ: ನಿಸಾರ್ ಕೆ.ಸಿ.ರೋಡ್, ರಹೀಂ ಸಾಲೆತ್ತೂರು, ಜಾಸೀರ್ ಸಾಮಣಿಗೆ
ಆಡಿಟರ್ : ಅಬೂಬಕ್ಕರ್ ಹಾಜಿ
ಹೈದರ್ ನಈಮಿ ಸ್ವಾಗತಿಸಿದರು. ನೂತನ ಕಮಿಟಿ ಕಾರ್ಯದರ್ಶಿ ಹನೀಫ್ ಹಾಜಿ ಮಂಜೇಶ್ವರ ಧನ್ಯವಾದ ಸಮರ್ಪಿಸಿದರು.





Social Icons