ಕಾಬೂಲ್ : ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಉದ್ದೇಶಪೂರ್ವಕವಾಗಿ 14 ಲಕ್ಷ ಹೆಣ್ಣುಮಕ್ಕಳನ್ನು ಶಾಲೆಗಳಿಂದ ಹೊರಗುಳಿಯುವಂತೆ ಮಾಡಿದೆ ಎಂದು ಯುನೆಸ್ಕೊ ಗುರುವಾರ ತಿಳಿಸಿದೆ.
ಹೆಣ್ಣುಮಕ್ಕಳು ಪ್ರೌಢ ಮತ್ತು ಉನ್ನತ ಶಿಕ್ಷಣ ಪಡೆಯುವುದಕ್ಕೆ ಅಫ್ಘಾನಿಸ್ತಾನದಲ್ಲಿ ನಿಷೇಧವನ್ನು ಹೇರಲಾಗಿದೆ. 2021ರಲ್ಲಿ ಅಫ್ಘಾನಿಸ್ತಾನದ ಆಡಳಿತವನ್ನು ತನ್ನ ಕೈವಶ ಮಾಡಿಕೊಂಡಿದ್ದ ತಾಲಿಬಾನ್ ಸರಕಾರ, ಹೆಣ್ಣುಮಕ್ಕಳು ಆರನೇ ತರಗತಿಗಿಂತ ಹೆಚ್ಚಿನ ಶಿಕ್ಷಣ ಪಡೆಯುವುದನ್ನು ನಿಷೇಧಿಸಿತ್ತು. ಇದೀಗ ತಾಲಿಬಾನ್ ಆಡಳಿತ ಮೂರು ವರ್ಷ ಪೂರ್ಣಗೊಂಡಿದ್ದು, ಈ ನಿಷೇಧ ತೆರವುಗೊಳಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಯಾವುದೇ 2023ರ ಏಪ್ರಿಲ್ ನಂತರ 3 ಲಕ್ಷ ಹೆಣ್ಣುಮಕ್ಕಳು ಒಳಗೊಂಡಂತೆ ತಾಲಿಬಾನ್ ಸಂಘಟನೆ ಅಧಿಕಾರ ವಹಿಸಿಕೊಂಡ ನಂತರ ಸುಮಾರು 14 ಲಕ್ಷ ಹೆಣ್ಣುಮಕ್ಕಳು ಪ್ರೌಢ ಶಾಲಾ ಶಿಕ್ಷಣ ಪಡೆಯುವ ಅವಕಾಶ ಕಳೆದುಕೊಂಡಿದ್ದಾರೆ ಎಂದು ಯುನೆಸ್ಕೊ ತಿಳಿಸಿದೆ. ಈ ನಿಷೇಧ ಜಾರಿಗೂ ಮುನ್ನ ಶಾಲೆಗಳಿಂದ ದೂರವುಳಿದವರನ್ನೂ ಸೇರಿಸಿಕೊಂಡರೆ, ಸುಮಾರು 25 ಲಕ್ಷ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.

Social Icons