ಇದೆಂತಹಾ ಪ್ರಚಾರದ ಗೀಳು?| 102 ಅಂತಸ್ತಿನ ಕಟ್ಟಡದ ಮೇಲೇರಿ ಸೆಲ್ಫಿ ತೆಗೆದ ಯುವಕ

ನವದೆಹಲಿ: ಇಂಟರ್ನೆಟ್ ಜಗತ್ತಿನಲ್ಲಿ ತಮ್ಮನ್ನು ತಾವು  ವೈರಲ್​ ಮಾಡಿಕೊಳ್ಳಲು  ಜನರು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ. ಇಲ್ಲಿ ಯುವಕನೊಬ್ಬ 102 ಅಂತಸ್ತಿನ ಕಟ್ಟಡದ ಮೇಲಕ್ಕೆ ಹತ್ತಿ ಜಗತ್ತು ಬೆಚ್ಚಿ ಬೀಳುವಷ್ಟು ಸಾಹಸ ಮಾಡಿದ್ದಾನೆ. ಈ ಕುಡಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ.



ಈ ವೀಡಿಯೋ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಸೆರೆಹಿಡಿದುದು ಎನ್ನಲಾಗಿದೆ. ಹುಡುಗನೊಬ್ಬ ತನ್ನದೇ ಸೆಲ್ಫಿ  ತೆಗೆಯಲು 102 ಅಂತಸ್ತಿನ ಕಟ್ಟಡದ ಮೇಲಕ್ಕೆ ಹತ್ತಿ ಫೋಟೋಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾನೆ. ನಂರ ಕಟ್ಟಡದ ತುದಿಯಲ್ಲಿ ನಿಂತು ಸೆಲ್ಫಿ ವಿಡಿಯೋ ಮಾಡುತ್ತಾನೆ. ಇದನ್ನು ನೋಡಿದ ನಂತರ, ಮೈರೋಮಾಂಚನವಾಗುತ್ತದೆ.



ಈ ವೀಡಿಯೊವನ್ನು @livejn ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ, ಇದುವರೆಗೆ 30 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಇದನ್ನೆಲ್ಲಾ ನೋಡಿದ ಮೇಲೆ ನೆಟ್ಟಿಗರು ಕೇಳುತ್ತಿರುವ ಮತ್ತೊಂದು ಪ್ರಶ್ನೆ ಇದೆಲ್ಲಾ ಬೇಕಾ ಗುರು ಎನ್ನುವುದು..!