ಪುಣೆ: ಸೆಲ್ಫಿ ಗೀಳು ಮತ್ತು ರೀಲ್ಸ್ ಹುಚ್ಚಾಟಗಳು ಪ್ರಾಣಕ್ಕೆ ಸಂಚಕಾರ ತರುವ ಘಟನೆಗಳು ಸಾಲು ಸಾಲಾಗಿ ನಡೆಯುತ್ತಿದ್ದರೂ ಯುವ ಜನರು ಬುದ್ಧಿ ಕಲಿಯುತ್ತಿಲ್ಲ.ಈ ಸಾಲಿಗೆ ಪುಣೆಯಲ್ಲಿ ನಡೆದಿರುವ ಈ ಘಟನೆ ಸೇರ್ಪಡೆ. ಪುಣೆಯ 29 ವರ್ಷದ ಯುವತಿಯೊಬ್ಬಳು ಭೊರಾನೆ ಘಾಟ್‌ನಲ್ಲಿ ಶನಿವಾರ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುವಾಗ ಆಳವಾದ ಕಂದಕಕ್ಕೆ ಬಿದ್ದಿದ್ದಾಳೆ. ಆದರೆ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸುಮಾರು 100 ಅಡಿ ಆಳದ ಕಣಿವೆಗೆ ಬಿದ್ದ ಆಕೆಯನ್ನು ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ಯಶಸ್ವಿಯಾಗಿವೆ.
ನಸ್ರೀನ್‌ನ ಸ್ನೇಹಿತರು ಕೂಡಲೇ ಸತಾರಾ ಪೊಲೀಸರಿಗೆ ಮಾಹಿತಿ
ನೀಡಿದ್ದರು. ಚಾರಣದಲ್ಲಿ ಪರಿಣತಿ ಹೊಂದಿರುವ ಶಿವೇಂದ್ರಸಿನ್ಹ ರಾಜೇ ಟ್ರೆಕ್ಕರ್ಸ್‌ಗೆ ಪೊಲೀಸರು
ಸಹಾಯಕ್ಕಾಗಿ ಕರೆ ಮಾಡಿದ್ದರು. ಪೊಲೀಸರ ನೆರವಿನಿಂದ ನುರಿತ ಚಾರಣಿಗರು ಸಾಧನಗಳ ಸಮೇತ ಕಣಿವೆಯಿಂದ
ಇಳಿದಿದ್ದರು. ಸುಮಾರು 60 ಅಡಿಗಳಷ್ಟು ಆಳದಲ್ಲಿ ಮರದ ನಡುವೆ ಸಿಲುಕಿದ್ದ ನಸ್ರೀನ್‌ಳನ್ನು
ಮೇಲೆತ್ತಿ ತಂದು ರಕ್ಷಿಸುವಲ್ಲಿ ತಂಡ ಸಫಲವಾಯಿತು. ನಸ್ರೀನ್ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದರೂ, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆಕೆಯನ್ನು ಸಮೀಪದ ಆಸ್ಪತ್ರೆಗೆ
ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು
ಅಧಿಕಾರಿಗಳು ತಿಳಿಸಿದ್ದಾರೆ.
Social Icons