ನವದೆಹಲಿ: ವ್ಯಾಟ್ಸಾಪ್ ತನ್ನ ಬಳಕೆದಾರರಿಗೆ ಪ್ರತಿ ಬಾರಿ ಹೊಸ ಹೊಸ ಫೀಚರ್ ನೀಡುತ್ತಾ ಬಂದಿದೆ. ಇದೀಗ ವ್ಯಾಟ್ಸಾಪ್ ಮತ್ತೊಂದು ಹೊಚ್ಚ ಫೀಚರ್ ಪರಿಚಯಿಸುತ್ತಿದೆ. ಈ ಫೀಚರ್ ಮೂಲಕ ಇಂಟರ್ನೆಟ್ ಇಲ್ಲದೆಯೂ ವ್ಯಾಟ್ಸಾಪ್ ಕಾರ್ಯನಿರ್ವಹಿಸಲಿಗೆ. ಫೋಟೋ, ವಿಡಿಯೋ, ಫೈಲ್ ಹಂಚಿಕೊಳ್ಳಲು ಸಾಧ್ಯವಾಗಲಿದೆ. ಆ್ಯಂಡ್ರಾಯ್ಡ್ ಹಾಗೂ ಐಫೋನ್ ಎರಡೂ ಬಳಕೆದಾರರು ಈ ಫೀಚರ್ ಲಭ್ಯವಾಗಲಿದೆ.
ಹೈಕ್ವಾಲಿಟಿ ಫೋಟೋ, ವಿಡಿಯೋ ಹಾಗೂ ಡ್ಯಾಕ್ಯುಮೆಂಟ್‌ಗಳನ್ನು ಪಕ್ಕದ ವ್ಯಾಟ್ಸಾಪ್ ಖಾತೆಗೆ ಇಂಟರ್ನೆಟ್ ಇಲ್ಲದೆ ಶೇರ್ ಮಾಡಲು ಹೊಸ ಫೀಚರ್ ಮೂಲಕ ಸುಲಭವಾಗಲಿದೆ. ಇಷ್ಟೇ ಅಲ್ಲ ಅದೇ ಕ್ವಾಲಿಟಿಯಲ್ಲಿ ಫೋಟೋ, ವಿಡಿಯೋಗಳು ಶೇರ್ ಆಗಲಿದೆ. ಅದೆಷ್ಟೆ ದೊಡ್ಡ ಗಾತ್ರದ ಫೈಲ್‌ಗಳನ್ನು ಇಂಟರ್ನೆಟ್ ಇಲ್ಲದೆ ಸುಲಭವಾಗಿ ಹಂಚಿಕೊಳ್ಳಬಹುದು. ಐಫೋನ್‌ನಲ್ಲಿರುವ ಏರ್‌ಡ್ರಾಪ್ ಫೀಚರ್ ರೀತಿಯಲ್ಲೇ ವ್ಯಾಟ್ಸಾಪ್ ಹೊಸ ಫೀಚರ್ ನೀಡುತ್ತಿದೆ.
ಈ ಫೀಚರ್ ಮೂಲಕ ಇಂಟರ್ನೆಟ್ ಬಳಸದೆ ಅಥವಾ ಇಲ್ಲದೆ ಫೈಲ್ ಶೇರ್ ಮಾಡಲು ಕೆಲ ವಿಧಾನಗಳಿವೆ. ಪ್ರಮುಖವಾಗಿ ನಿಮ್ಮ ಹತ್ತಿರದ ವ್ಯಾಟ್ಸಾಪ್ ಖಾತೆಗಳಿಗೆ ಹಂಚಿಕೆ ಮಾಡಲು ಸಾಧ್ಯವಾಗಲಿದೆ. ಕ್ಯೂರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು, ಹಂಚಿಕೊಳ್ಳಬೇಕಿರುವ ಫೈಲ್ ಆಯ್ಕೆ ಮಾಡಿ ಸೆಂಡ್ ಮಾಡಿದರೆ ಸಾಕು. ಅದೇ ಕ್ವಾಲಿಟಿ, ಅದೇ ಗಾತ್ರದಲ್ಲಿ ಫೈಲ್ ಶೇರ್ ಆಗಲಿದೆ. ಹೊಸ ಫೀಚರ್ ಬಳಕೆದಾರರಿಗೆ ಹಲವು ರೀತಿಯಲ್ಲಿ ನೆರವಾಗಲಿದೆ.
Social Icons