ಅಬ್ಬಾ..!! ತನ್ನ ಅದ್ಧೂರಿ ವಿವಾಹದಲ್ಲಿ ಅನಂತ್​ ಅಂಬಾನಿ ಧರಿಸಿದ್ದ Watchನ ಬೆಲೆ ಎಷ್ಟು ಗೊತ್ತೇ?!!

ನವದೆಹಲಿ: ಈಗ ಎಲ್ಲಿ ನೋಡಿದರೂ ಉದ್ಯಮ ದಿಗ್ಗಜ ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯದ್ದೇ ಸುದ್ದಿ.ಜುಲೈ 12ರ ಶುಕ್ರವಾರದಂದು ಅನಂತ್ ಅಂಬಾನಿ ಅವರ ವಿವಾಹ ಸಮಾರಂಭ ನೆರವೇರಿತು.ಈ ಮದುವೆಗೆ ಬಾಲಿವುಡ್, ಟಾಲಿವುಡ್, ಸ್ಯಾಂಡಲ್​ವುಡ್​ ಹಾಗೂ ಕಾಲಿವುಡ್ ಸೆಲೆಬ್ರಿಟಿಗಳ ಜತೆಗೆ ಹಾಲಿವುಡ್ ಸೆಲೆಬ್ರಿಟಿಗಳು, ಕ್ರೀಡೆ, ರಾಜಕೀಯ ನಾಯಕರು ಕೂಡ ಆಗಮಿಸಿದ್ದರು. ಮದುವೆಗೆ ಬಂದವರಿಗೆ ನೀಡಿದ ಭರ್ಜರಿ ಉಡುಗೊರೆಗಳೂ ಭಾರೀ ಸುದ್ದಿಯಲ್ಲಿವೆ. ಇದೆಲ್ಲಕ್ಕಿಂತ ಮೀರಿ ಚರ್ಚೆಯಲ್ಲಿರುವುದು ಅನಂತ್ ಅಂಬಾನಿ ಧರಿಸಿದ್ದ ವಾಚ್.



ಹೌದು, ಅನಂತ್ ಅಂಬಾನಿ ಮದುವೆಯ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರ ಮತ್ತು ದುಬಾರಿ ವಾಚ್​ ಅನ್ನು ಧರಿಸಿದ್ದರು ಎಂಬ ಸಂಗತಿ ಬಯಲಾಗಿದೆ. ಮದುವೆ ಸಂದರ್ಭದಲ್ಲಿ ಅನಂತ್ ಅಂಬಾನಿ ಪೇಟ ಧರಿಸಿದ್ದರು. ಅದರ ಮೇಲೆ ಅಲಂಕೃತವಾದ ಅಪರೂಪದ ವಜ್ರವನ್ನು ಹೊದಿಸಲಾಗಿದೆ. ಇದನ್ನು ಕಲ್ಗಿ ಎಂದು ಕರೆಯಲಾಗುತ್ತದೆ. ಇತಿಹಾಸದಲ್ಲಿ ಇದನ್ನು ಭಾರತೀಯ ರಾಜರ ಸಂಕೇತವೆಂದು ಪರಿಗಣಿಸಲಾಗಿದೆ. ಅನೇಕ ರಾಜರು ಇದನ್ನು ಧರಿಸುತ್ತಿದ್ದರು. ಇದು ಅತಿ ದೊಡ್ಡ ವಜ್ರವಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಇಂತಹ ವಜ್ರಗಳು ಬಹಳ ಕಡಿಮೆ ಎಂದು ಹೇಳಲಾಗುತ್ತದೆ. ಈ ರೀತಿಯ ಅಪರೂಪದ ವಜ್ರಗಳನ್ನು ಟೈಪ್ IIA ವಜ್ರಗಳು ಎಂದು ಕರೆಯಲಾಗುತ್ತದೆ. ಅನಂತ್ ಅಂಬಾನಿ ಧರಿಸಿರುವ ವಜ್ರದ ಬೆಲೆ ಸುಮಾರು 160 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.

ಅಲ್ಲದೆ ಅನಂತ್ ಅಂಬಾನಿ ಮದುವೆಯ ಸಂದರ್ಭದಲ್ಲಿ 54 ಕೋಟಿ ರೂಪಾಯಿ ಬೆಲೆಬಾಳುವ ವಾಚ್ ಧರಿಸಿದ್ದರು. ಬಾಲಿವುಡ್‌ನ ತನ್ನ ಸ್ನೇಹಿತರಿಗೆ ತಲಾ 2 ಕೋಟಿ ರೂಪಾಯಿ ಮೌಲ್ಯದ ದುಬಾರಿ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ಒಟ್ಟಿನಲ್ಲಿ ಅನಂತ್ ಅಂಬಾನಿ ಮದುವೆ ಇಡೀ ಜಗತ್ತಿನಲ್ಲೇ ಒಂದು ವೈಭೋಗ ಎನ್ನುವ ಚರ್ಚೆಗಳು ಹರಿದಾಡುತ್ತಿವೆ.