ಮನೆಗೆ ಬಂದು ಟಿವಿ ಸೀರಿಯಲ್ ನೋಡುತ್ತಾ ಕುಳಿತ ನಾಗರಹಾವು..!!| Video Viral

ನವದೆಹಲಿ: ನಾಗರಹಾವೊಂದು ಟಿವಿ ಮುಂದೆ ಹೆಡೆಯೆತ್ತಿ, ಸಿರಿಯಲ್ ನೋಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಈ ವಿಚಾರ ತಿಳಿದವರು ಹೀಗೂ ಇದೆಯೇ ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ. ಇದು ನಿಜಕ್ಕೂ ಹೀಗೆಯೇ ನಡೆದಿದೆಯೋ ಅಥವಾ ನೋಡಿದವರು ಈ ರೀತಿ ವೈರಲ್ ಮಾಡುತ್ತಿದ್ದಾರೋ ತಿಳಿಯದು, ಆದರೆ ವೀಡಿಯೋ ಮಾತ್ರ ಸಖತ್ ಮನರಂಜನೀಯವಾಗಿದೆ.


ಸ್ನೇಕ್ ಶಿವು ಚಿತ್ರದುರ್ಗ ಎಂಬುವವರು ತಮ್ಮ ಇನ್​​ಸ್ಟಾಗ್ರಾಮ್​​ನಲ್ಲಿ ವೀಡಿಯೋ ಹಾಕಿಕೊಂಡಿದ್ದು
, ಹಾವು ಟಿವಿ ನೋಡುತ್ತಿರುವ ದೃಶ್ಯವನ್ನು ನೋಡಿದೆ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡು ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಮನೆಯೊಳಗೆ ನುಗ್ಗಿದ ಹಾವು ಟಿವಿ ಮುಂದೆ ಕುಳಿತು, ಸತತ 2 ಗಂಟೆಗಳ ಕಾಲ ಟಿವಿ ನೋಡಿದೆತೆ. ಈ ಘಟನೆ ಎಲ್ಲಿ ನಡೆದಿದ್ದು ಎನ್ನುವ ಮಾಹಿತಿ ಮಾತ್ರ ಲಭ್ಯವಾಗಿಲ್ಲ. ಎರಡು ಗಂಟೆಗೂ ಅಧಿಕ‌ ಕಾಲ ಮನೆಯಲ್ಲಿದ್ದರು ಯಾರಿಗೂ ಯಾವುದೇ ತೊಂದರೆ ಕೊಡದೇ ಸಿರಿಯಲ್ ನೋಡುತ್ತಾ ಕೂತಿದೆ ಎನ್ನಲಾಗಿದೆ. ವೀಡಿಯೋದಲ್ಲಿ ಮಂಚದ ಮೇಲೆ ಮಹಿಳೆಯೋರ್ವರು ಭಯದಿಂದ ಇರುವುದನ್ನು ಕೂಡ ಗಮನಿಸಬಹುದು.


 ಹಾವು ಟಿವಿ ಮುಂದೆ ಕುಳಿತು ಸೀರಿಯಲ್‌ ನೋಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಇಂತಹ ವಿಚಿತ್ರ ಘಟನೆಗಳ ವಿಡಿಯೋಗಳು ಇಂಟರ್ನೆಟ್‌ನಲ್ಲಿ ವೇಗವಾಗಿ ಹರಡುತ್ತವೆ ಮತ್ತು ಜನರ ಗಮನ ಸೆಳೆಯುತ್ತವೆ. ಇದು ಕೂಡ ಆ ಮೂಲಕವೇ ಜನಪ್ರಿಯತೆ ಪಡೆದಿದೆ.  
ಇದು ನಾಗಿಣಿ ಸೀರಿಯಲ್‌ಗೆ ಆಡಿಷನ್‌ ಕೊಡಲು ಬಂದಿರಬೇಕು, ಹಾವೂ ಸೀರಿಯಲ್ ನೋಡಬಹುದು ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ವೀಡಿಯೋ ಮಾತ್ರ ತುಂಬಾ ವೈರಲ್ ಆಗುತ್ತಿದೆ.