ಉಡುಪಿ : 36 ವರ್ಷಗಳ ನಂತರ ಭಂಡಾರಿಕೆರಿ ಶ್ರೀಪಾದರು ತಮ್ಮ ಆತ್ಮೀಯರಾದ ಪರ್ಯಾಯ ಶ್ರೇಪಾದರಾದ ಪೂಜ್ಯ ಪುತ್ತಿಗೆ ಶ್ರೀಪಾದರ ಆಹ್ವಾನದ ಮೇರೆಗೆ ಉಡುಪಿಯ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಚಾತುರ್ಮಾಸ್ಯ ಸ್ವೀಕರಿಸುವ ಪ್ರಯುಕ್ತ ಉಡುಪಿ ಕ್ಷೇತ್ರಕ್ಕೆ ಆಗಮಿಸಿದಾಗ ಶ್ರೀ ಕೃಷ್ಣ ಮಠದ ವತಿಯಿಂದ ಹಾಗೂ ಸ್ವಾಗತ ಸೇವಾ ಸಮಿತಿಯ ವತಿಯಿಂದ ಶ್ರೀಮಠದ ಪಟ್ಟದ ದೇವರು ಹಾಗೂ ಶ್ರೀಪಾದರನ್ನು ಸುವರ್ಣ ಪಲ್ಲಕ್ಕಿ ಯೊಂದಿಗೆ ಸ್ವಾಗತಿಸಿ ಪರ್ಯಾಯ ಶ್ರೀಪಾದರು ಸಾಂಪ್ರದಾಯಿಕ ಸ್ವಾಗತ ಸಲ್ಲಿಸಿದರು .ತದನಂತರ ರಾಜಾಂಗಣದಲ್ಲಿ ನಡೆದ ಭವ್ಯ ಸ್ವಾಗತ ಸಮಾರಂಭ ನೆರವೇರಿತು.
ಕುಮಾರಿ ಪ್ರಸನ್ನ ವಿದ್ಯೆಶ ತೀರ್ಥರರು ಸ್ವಯಂ ರಚಿಸಿದ ದಾಸರ ಪದವನ್ನು ಗೀತೆಯಾಗಿ ಹಾಡಿದಳು
ವಿದ್ವಾನ್ ಡಾ .ಗೋಪಾಲಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು
ಸ್ವಾಗತ ಸಮಿತಿಯ ಯುಬಿ ಶ್ರೀನಿವಾಸ್ ಪ್ರಸ್ತಾವನೆ ಸಲ್ಲಿಸಿದರು
ವಿದ್ವಾನ್ ಬಿದರಹಳ್ಳಿ ರಘೋತ್ತಮಾಚಾರ್ಯರು ಅಭಿನಂದನಾ ಭಾಷಣ ಸಲ್ಲಿಸಿದರು.
ದಿವಾನರಾದ ನಾಗರಾಜ ಆಚಾರ್ಯ ಕಾರ್ಯದರ್ಶಿ ಪ್ರಸನ್ನಚಾರ್ಯ,ರತೀಶ್ ತಂತ್ರಿ , ಪ್ರದೀಪ್ ಕಲ್ಕುರ್ ಸ್ವಾಗತ ಸಮಿತಿಯ ಚಂದ್ರಶೇಖರ್ ಆಚಾರ್ಯ ರಾಜೇಶ್ ಭಟ್,ಜಯರಾಮಚಾರ್ಯ ,ರಮೇಶ್ ಭಟ್ ,ರವೀಂದ್ರಾಚಾರ್ಯ ಮುಂತಾದವರು ಉಪಸ್ಥಿತರಿದ್ದರು .
Social Icons