ಕಾರ್ಕಳ : ಪಡುಬಿದ್ರಿಯಿಂದ ಕಾರ್ಕಳಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ವಾಹನ ಸವಾರರಿಂದ ಸುಂಕ ವಸಲಿ ಮಾಡಬೇಕೆಂದು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಈ ಹಿಂದೆ ಬಹಳಷ್ಟು ಬಾರಿ ಪ್ರಯತ್ನ ನಡೆಸಿತ್ತು.
ಆದರೆ ಸಾರ್ವಜನಿಕರು ಹಾಗೂ ವಿವಿದ ಸಂಘಟನೆಗಳ ಹೋರಾಟದಿಂದ ಅವರ ಪ್ರಯತ್ನ ವಿಫಲ ಗೊಳಿಸಲಾಗಿತ್ತು. ಮುಂದಿನ 10 ದಿನದೊಳಗೆ ಆದೇಶ ರದ್ದಾಗದಿದ್ದಲ್ಲಿ ಸಂಘಟನೆ ಎಲ್ಲಾ ತರದ ಸಂವಿಧಾನ ಬದ್ಧವಾದ ಹೋರಾಟವನ್ನು ಕೈಗೊಳ್ಳಲು ಈಗಾಗಲೇ ತಯಾರಿಯನ್ನು ಮಾಡಿಕೊಂಡಿರುತ್ತದೆ.
ಈ ಬಗ್ಗೆ ಉಡುಪಿ ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಈ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಿ ಕೊಡಬೇಕಾಗಿ ಹಾಗೂ ಟೋಲ್ ನ ಹೆಸರಿನಲ್ಲಿ ಜನರನ್ನು ಲೂಟಿ ಮಾಡುವ ಯೋಜನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.
Social Icons