UDUPI ವೈಯಕ್ತಿಕ ವಿಭಾಗದಲ್ಲಿ ಯೋಗಾಸನ ಸ್ಪರ್ಧೆಯಲ್ಲಿ ಉಡುಪಿಯ ಕುಮಾರಿ ಶಿವಾನಿ ಶೆಟ್ಟಿ ಸ್ಪರ್ಧಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಉಡುಪಿ : ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಎಸ್‌ಜಿಎಸ್ ಯೋಗ ಸಂಸ್ಥೆ ಪ್ರಾಯೋಜಿಸಿದ್ದ ಬೆಂಗಳೂರು ಕೊರಮಂಗಲದ ಇಂಡೋರ್ ಸ್ಟೇಡಿಯಂನಲ್ಲಿ 12 ರಿಂದ 15 ವಯೋಮಿತಿಯ ವಿಭಾಗದಲ್ಲಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಶಿವಾನಿ ಶೆಟ್ಟಿ ಸ್ಪರ್ಧಿಸಿ ಸಾಂಪ್ರದಾಯಿಕ ಯೋಗಾಸನ ಮತ್ತು ವೈಯಕ್ತಿಕ ವಿಭಾಗದಲ್ಲಿ ಯೋಗಾಸನ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲಾ ಪ್ರಿನ್ಸಿಪಾಲ್, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.