UDUPI ಗಂಡ ಹೆಂಡತಿ ನಡುವೆ ಮನಸ್ತಾಪ : ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಛಾಯಾಗ್ರಾಹಕ



ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆ ಕಾಳಾವರ ಜನತಾ ಕಾಲೋನಿ ನಿವಾಸಿ ಹರೀಶ್ ಬೋವಿ(42) ಎಂದು ತಿಳಿದು ಬಂದಿದೆ.

ಗಂಡ ಹೆಂಡತಿ ನಡುವೆ ಜಗಳ ಉಂಟಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇಬ್ಬರ ಮನಸ್ತಾಪವನ್ನು ಅಲ್ಲೇ ಸರಿಪಡಿಸಿದ್ದಾರೆ‌. ಬಳಿಕ ಠಾಣೆಯಿಂದ ಆಟೋದಲ್ಲಿ ಮನೆಗೆ ಹೋಗುತ್ತಿರುವಾಗ ಹೊಳೆ ಹತ್ತಿರ ನಿಲ್ಲಿಸಿ ಸೇತುವೆ ಮೇಲಿಂದ ನದಿಗೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

ವರದಿ : ಜಯಂತ್ ಉಡುಪಿ