ಉಡುಪಿ : ಭಂಡಾರ ಕೇರಿ ಶ್ರೀಪಾದರ ಚಾತುರ್ಮಾಸ್ಯದ ಸ್ವಾಗತ ಸಮಾರಂಭ ಸಭೆಯಲ್ಲಿ ಅಧ್ಯಕ್ಷೀಯ ಅನುಗ್ರಹ ಸಂದೇಶ ನೀಡಿದ ಪರ್ಯಾಯ ಶ್ರೀಪುತ್ತಿಗೆ ಶ್ರೀಪಾದರು ಭಂಡಾರಕೇರಿ ಶ್ರೀಗಳು ಉಡುಪಿಯಲ್ಲಿ 37 ವರ್ಷಗಳ ಬಳಿಕ ಚಾತುರ್ಮಾಸ್ಯ ಸ್ವೀಕರಿಸಲಿದ್ದಾರೆ ಭಾಗವತ ಫಲ ಭಗವದ್ಗೀತೆ ಕ್ಷೀರ ಎರಡರ ಪ್ರಸರಣ ಉಡುಪಿಯ ಜನತೆಗೆ ಆಗಲಿದೆ ಉಡುಪಿ ಕ್ಷೇತ್ರ ವಾಗಿದ್ದು ಸದಾ ಒಂದಲ್ಲ ಒಂದು ಯತಿಗಳ ಪಾಠ ಪ್ರವಚನ ಚಾತುರ್ಮಾಸ್ಯ ಪರ್ವಕಾಲ ಸಂಸ್ಕೃತಿಯ ಕಾರ್ಯಕ್ರಮ ನಿತ್ಯ ರಥೋತ್ಸವ ನಿತ್ಯಾನ್ನ ದಾನ ಹೀಗೆ ಸದಾ ದೈವಿಕ ವಾತಾವರಣದಿಂದ ಕೂಡಿರುವ ಉಡುಪಿಯ ಮಹತ್ವವನ್ನು ಎಲ್ಲರೂ ಅರಿಯುವಂತಾಗಬೇಕು.
ಭಂಡಾರ ಕೇರಿ ಶ್ರೀಪಾದರು ನಡೆಸಲಿರುವ ಮನೆ ಮನೆಯಲ್ಲಿ ಭಾಗವತ ಪ್ರವಚನ ಕಾರ್ಯಕ್ರಮದ ಉಪಯೋಗ ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದು ತಿಳಿಸಿದರು .
ಪುತ್ತಿಗೆ ಶ್ರೀಪಾದರು ಆಶೀರ್ವಚನಗೈದರು.ಶ್ರೀಮಠದ ಆಡಳಿತ ಮಂಡಳಿಯ ಸದಸ್ಯರು ವಿದ್ವಾಂಸರು ಉಪಸ್ಥಿತರಿದ್ದರು.
Social Icons