UDUPI ದಂಪತಿಗಳ ಆಕಸ್ಮಿಕ ನಿಧನಕ್ಕೆ ಕೆ.ಉದಯ ಕುಮಾರ್ ಶೆಟ್ಟಿ ತೀವ್ರ ಸಂತಾಪ

ಉಡುಪಿ :  ನಗರದ ಅಂಬಲಪಾಡಿಯ ಉದ್ಯಮಿ ರಮಾನಂದ ಶೆಟ್ಟಿ ಹಾಗೂ ಅವರ ಧರ್ಮಪತ್ನಿ ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿನಿ ರಮಾನಂದ ಶೆಟ್ಟಿ ಆಕಸ್ಮಿಕ ಮರಣಕ್ಕೆ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ದಂಪತಿಗಳಿಬ್ಬರೂ ಸಮಾಜಮುಖಿಯಾಗಿ ಜನಪರ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ದೀರ್ಘಕಾಲ ಬದುಕಿ ಬಾಳ ಬೇಕಾದ ಜನಾನುರಾಗಿ ಜೋಡಿ ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿರುವುದು ತೀವ್ರ ನೋವನ್ನುಂಟುಮಾಡಿದೆ ಎಂದು ಅವರು ತಿಳಿಸಿದ್ದಾರೆ.