ಉಡುಪಿ : ಮಲ್ಪೆಯ ಸಿಟಿಜನ್ ಸರ್ಕಲ್ ಸಮೀಪದ ನೆರ್ಗಿ ಎಂಬಲ್ಲಿ ನಿಂತಿದ್ದ ಬಸ್ಸಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ 07:30 ಕ್ಕೆ ಸಂಭವಿಸಿದೆ.
ಗಾಯಾಳು ಸವಾರನನ್ನು ಉಡುಪಿಯ ಗುಂಡಿಬೈಲಿನ ಲಕ್ಷ್ಮಣ (60) ಎಂದು ಗುರುತಿಸಲಾಗಿದ್ದು , ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ತಮ್ಮ ಅಂಬುಲೆನ್ಸ್ ಮೂಲಕ ಗಾಯಾಳುವನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದೆ.ಲಕ್ಷ್ಮಣ ಅವರು ಗುಂಡಿಬೈಲುವಿನಲ್ಲಿ ಕಾರ್ತಿಕ್ ವೆಲ್ಡಿಂಗ್ ವರ್ಕ್ ಶಾಪ್ ನಡೆಸುತ್ತಿದ್ದಾರೆ.
ವರದಿ : ಜಯಂತ್ ಉಡುಪಿ
Social Icons