UDUPI ಬ್ರಹ್ಮಾವರದಲ್ಲಿ ಫಾಧರ್ ನರೋನ್ಹ ರವರ 88 ನೇ ಪುಣ್ಯ ಸ್ಮರಣೆ

ಬ್ರಹ್ಮಾವರ : ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಬ್ರಹ್ಮಾವರ ಭಾಗದಲ್ಲಿ  ಶೈಕ್ಷಣಿಕ ಕ್ರಾಂತಿಯನ್ನು ಆರಂಭಿಸಿದ  ಎಸ್ ಎಂ ಎಸ್ ಆರ್ಥೊಡೆಕ್ಸ್  ಸಿರಿಯನ್  ಚರ್ಚ್ನ ಧರ್ಮಗುರು ಆಗಿದ್ದ  ಫಾಧರ್  ನರೋನ್ಹ ರವರ  88 ನೇ ಪುಣ್ಯ ಸ್ಮರಣೆ ಸೋಮವಾರ ಜರುಗಿತು.
 
ಚರ್ಚನ  ವತಿಯಿಂದನೂರಾರು  ಕ್ರೈಸ್ತ ಭಾಂಧವರು  ಬ್ರಹ್ಮಾವರ  ರಾಷ್ಟ್ರಿಯಹೆದ್ದಾರಿ 66  ಮೂಲಕ ಆಕಾಶವಾಣಿ ವೃತ್ತ ರಥ ಬೀದಿ ಮೂಲಕ ಕಾಲುನಡಿಗೆ ಜಾಥಾದಿಂದ ಸಾಗಿಬಂದು  ಎಸ್ ಎಂ ಎಸ್  ಚರ್ಚ ಬಳಿಸಮಾಪನಗೊಂಡಿತು.
 ಬಳಿಕ ಚರ್ಚನಲ್ಲಿ  ಫಾಧರ್ ಎಂ ಸಿ ಮಥಾಯಿಯವರ ನೇತೃತ್ವದಲ್ಲಿ 9 ಸಹಾಯಕ ಗುರುಗಳ ಸಹಭಾಗಿತ್ವದಲ್ಲಿ ವಿಶೇಷ ಪೂಜೆ ಜರುಗಿತು. 

ಮುಂಬಾಯಿ,  ಬೆಂಗಳೂರು ಸಿದ್ದಾಪುರ  ಹುಲಿಕಲ್  ಕೊಳಲಗಿರಿ ಕಂಡ್ಲೂರು ಕೂರಾಡಿ ಸೇರಿದಂತೆ ಅನೇಕ ಭಾಗದ ಕ್ರೈಸ್ತ ಭಾಂಧವರು ಭಾಗವಹಿಸಿದ್ದರು.ಟ್ರಸ್ಟಿಗಳಾದ  ಮಿಲ್ಟನ್ ಒಲಿವೇರಾ,  ಕಾರ್ಯದರ್ಶಿ  ಲಾರೆನ್ಸ್ ಡಿ,ಸೋಜ  ಇನ್ನಿತರು ನೇತೃತ್ವ ವಹಿಸಿದ್ದರು.