ನವದೆಹಲಿ: ದುಬೈ ರಾಜನ ಪುತ್ರಿ, ಅರ್ಥಾತ್ ರಾಜಕುಮಾರಿ ತನ್ನ ಪತಿ ಬೇರೊಬ್ಬಾಕೆಯನ್ನು ಕಟ್ಟಿಕೊಂಡಿದ್ದಾನೆಂದು ತಿಳಿಯುತ್ತಲೇ ಸೋಶಿಯಲ್ ಮೀಡಿಯಾದಲ್ಲೇ ಪತಿಗೆ ತ್ರಿಬಲ್ ತಲಾಖ್ ಹೇಳಿ ಸುದ್ದಿಯಾಗಿದ್ದಾರೆ.
ದುಬೈ ರಾಜ ಮಹಮ್ಮದ್ ರಶೀದ್ ಅಲ್ ಮಕ್ತುಮ್‌ರವರ ಪುತ್ರಿ ಶೈಖಾ ಮಹ್ರಾ ಅಲ್ ಮಕ್ತುಮ್ ತಮ್ಮ ಪತಿಗೆ ಮಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮತ್ತು ವಿರುದ್ಧ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲೇ ವಿಚ್ಛೇದನ ಮಾಡಿರುವುದನ್ನು ಹೇಳಿಕೊಂಡಿದ್ದಾರೆ. ಜುಲೈ 16ರಂದು ರಾಜಕುಮಾರಿ ಈ ಪೋಸ್ಟ್ ಹಾಕಿದ್ದು ಬರೆದಿರುವ ರೀತಿ ಹೀಗಿದೆ. ಪ್ರೀತಿಯ ಪತಿಯೇ, ನೀವು ಬೇರೊಬ್ಬ ಸಂಗಾತಿಯನ್ನು ಕಟ್ಟಿಕೊಂಡಿದ್ದೀರಾ.. ಆದ್ದರಿಂದ ನಾನು ಡೈವರ್ಸ್ ಮಾಡುತ್ತೇನೆ, ಡೈವರ್ಸ್ ಮಾಡುತ್ತೇನೆ, ಡೈವರ್ಸ್ ಮಾಡುತ್ತೇನೆ ಎಂದು ಪುರುಷರು ತಲಾಖ್ ಹೇಳಿದ ರೀತಿಯಲ್ಲೇ ಮೂರು ಬಾರಿ ಡೈವರ್ಸ್ ಘೋಷಣೆ ಮಾಡಿಕೊಂಡು ಪೋಸ್ಟ್ ಮಾಡಿದ್ದಾರೆ.
ದುಬೈ ರಾಜ ಮಹಮ್ಮದ್ ಬಿನ್ ರಶೀದ್ ಅವರ ಪುತ್ರಿ ಶೈಖಾ ಮಹ್ರಾಗೆ 2023ರ ಮೇ ತಿಂಗಳಲ್ಲಿ ಮದುವೆಯಾಗಿತ್ತು. ಒಂದು ವರ್ಷದ ನಂತರ ಅಂದರೆ, ಇದೇ ಜೂನ್ ತಿಂಗಳ ಆರಂಭದಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಳು. ತನಗೆ ಮಗುವಾಗಿದ್ದನ್ನೂ ಆಕೆ ಇನ್ ಸ್ನಾ ಪೇಜಿನಲ್ಲಿ ಹಾಕ್ಕೊಂಡಿದ್ದಳು. ಇದೀಗ ಒಂದೇ ತಿಂಗಳಲ್ಲಿ ಆಕೆಯೇ ವಿಚ್ಛೇದನ ಘೋಷಣೆ ಮಾಡಿಕೊಂಡಿದ್ದಾರೆ. ದುಬೈನಲ್ಲಿ ಅರಬ್ಬಿಗಳದ್ದೇ ಸಾಮ್ರಾಜ್ಯ ಆಗಿದ್ದರೂ, ರಾಜಕುಮಾರಿ ಆಗಿರುವ ಶೈಖಾ ಮಹ್ರಾ ಅವರು ವಿಚ್ಛೇದನ ಘೋಷಣೆ ಮಾಡಿ ಸುದ್ದಿಯಾಗಿದ್ದಾಳೆ.


Social Icons