ಬೆಂಗಳೂರು: ಒಳ್ಳೇ ಸಿನಿಮಾಗಳೇ ಬರ್ತಿಲ್ಲ ಸರ್, ಟಿಕೆಟ್ ಗೆ ದುಡ್ಡು ಕೊಟ್ಟಿದ್ದು ವೇಸ್ಟ್ ಆಯ್ತು..ಇದು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗಿ ಕೇಳಿ ಬರುತ್ತಿರುವ ಮಾತು ಏನೆಂದರೆ ಕನ್ನಡ ಸಿನಿಮಾಗಳು ಕಡಿಮೆ ರಿಲೀಸ್ ಆಗುತ್ತಿದೆ, ಕನ್ನಡ ಸಿನಿಮಾ ನೋಡುವವರೇ ಇಲ್ಲ, ಸ್ಟಾರ್ ನಟರ ಸಿನಿಮಾ ರಿಲೀಸ್ ಆಗುತ್ತಿದೆ...ಒಟ್ಟಾರೆ ವೀಕ್ಷಕರಿಗೆ ಸ್ಯಾಂಡಲ್‌ವುಡ್ ಮೇಲೆ ಆಸಕ್ತಿ ಕಡಿಮೆ ಆಗುತ್ತಿದೆ. ಹೀಗಾಗಿ ಹೊಸ ಮಾಸ್ಟರ್ ಪ್ಲ್ಯಾನ್ ಮಾಡುವ ಮೂಲಕ ವೀಕ್ಷಕರ ಗಮನ ಸೆಳೆಯಲು ಚಿತ್ರತಂಡವೊಂದು ಮುಂದಾಗಿದೆ.
ಇದೇ ಜುಲೈ 19ರಂದು ರಿಲೀಸ್ ಆಗುತ್ತಿರುವ ನಾಕ್‌ಔಟ್ ಸಿನಿಮಾ ತಂಡ ಹೊಸ
ಪ್ಲ್ಯಾನ್ ಮಾಡಿದೆ. ಅದುವೇ ಅರ್ಥ ಸಿನಿಮಾ ಉಚಿತವಾಗಿ ನೋಡಿ, ಇನ್ನರ್ಧ ಬೇಕಿದ್ರೆ
ಟಿಕೆಟ್ ಖರೀದಿಸಿ ಎಂದು. ಇದರ ಅರ್ಥ ಏನೆಂದರೆ ಟಿಕೆಟ್ ಖರೀದಿಸಿ ಸಿನಿಮಾ ಚೆನ್ನಾಗಿಲ್ಲ ಅಂತ ಹೊರ
ಬಂದು ಬೇಸರ ಮಾಡಿಕೊಳ್ಳುವ ಬದಲು ಫಸ್ಟ್ ಹಾಫ್ ಸಿನಿಮಾ ನೋಡಿದ ಮೇಲೆ ಏನೋ ಇಂಟ್ರೆಸ್ಟಿಂಗ್
ಆಗಿದೆ ಅಂತ ಎರಡನೇ ಭಾಗ ನೋಡಲು ಮುಂದಾಗುವವರು ಟಿಕೆಟ್ ಖರೀದಿಸಬೇಕಾಗುತ್ತದೆ.
'ಚಿತ್ರ ಗುಣಮಟ್ಟವನ್ನು
ಮೊದಲರ್ಧ ಸಿನಿಮಾದಲ್ಲಿ ನಿರ್ಧರಿಸುವ ಪ್ರೇಕ್ಷಕರು ಉಚಿತವಾಗಿ ಸಿನಿಮಾ ನೋಡಬಹುದು. ನಂತರ
ಸೆಕೆಂಡ್ ಹಾಫ್ ಸಿನಿಮಾ ನೋಡಬೇಕು ಅನಿಸಿದರೆ ಮಾತ್ರ ಟಿಕೆಟ್ ಕೊಂಡು ನೋಡಬಹುದು. ಪ್ರಮುಖ ಚಿತ್ರಮಂದಿರಗಳಲ್ಲಿ
ಮಾತ್ರ ಈ ವ್ಯವಸ್ಥೆ ಸೀಮಿತ' ಎಂದು ಚಿತ್ರತಂಡ ಹೇಳಿದೆ.

Social Icons