ಕಿನ್ನಿಗೋಳಿ:ಮೂರುಕಾವೇರಿ ಒಂಬತ್ತು ಮಾಗಣೆ ಶ್ರೀ ಮಹಮ್ಮಾಯೀ ದೇವಸ್ಥಾನ ದೇವಸ್ಥಾನಕ್ಕೆ ಹೊಸ ಆಡಳಿತ ಸಮತಿಯನ್ನು ರಚಿಸುವ ನಿಟ್ಟಿನಲ್ಲಿ ಸಭೆ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ದೇವಸ್ಥಾನದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದAತೆ ಹಳೆಯ ಸಮಿತಿಯ ಸದಸ್ಯರನ್ನು ಮುಂದಿಟ್ಟು ಹೊಸ ಸಮಿತಿ ಮಾಡುವುದು ಹಾಗೂ ಮುಂದಿನ ಜು. ೭ ರಂದು ಸಭೆ ನಡೆಸಿ ಒಮ್ಮತ ಅಭಿಪ್ರಾಯದಲ್ಲಿ ಆಡಳಿತ ಕಮಿಟಿ ಮಾಡಲಾಗುವುದು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಅರ್ಚಕ ವೆ| ಮೂ. ಗಣೇಶ್ ಭಟ್ ಭುವನಾಭಿರಾಮ ಉಡುಪ, ಚಿತ್ತರಂಜನ್ ಭಂಡಾರಿ ಐಕಳ ಬಾವ , ದೇವಿ ಪ್ರಸಾದ್ ಶೆಟ್ಟಿ ಕೊಡೆತ್ತೂರು, ಪ್ರಶನ್ನ ಶೆಟ್ಟಿ ಅತ್ತೂರು ಗುತ್ತು, ಜಯಪಾಲ ಶೆಟ್ಟಿ ಐಕಳ, ಲವ ಶೆಟ್ಟಿ , ಸ್ವರಾಜ್ ಶೆಟ್ಟಿ , ನಿತಿನ್ ಶೆಟ್ಟಿ ದೇವಸ್ಯ ಕೊಡೆತ್ತೂರು ಗುತ್ತು, ಬಾಬು ಶೆಟ್ಟಿ ಕೊಡೆತ್ತೂರು, ಯೋಗೀಶ್ ಕೋಟ್ಯಾನ್, ಶ್ರೀಧರ ಶೆಟ್ಟಿ ಕೊಡೆತ್ತೂರು ಮುಕ್ಕ , ಸುಖೇಶ್ ಚಂದ್ರ ಶೆಟ್ಟಿ , ಹರೀಶ್ ಶೆಟ್ಟಿ , ವಿಜಯ ಶೆಟ್ಟಿ ಆಜಾರಗುತ್ತು , ಶ್ರೀಧರ ಆಳ್ವ ಕೊಡೆತ್ತೂರು ಮಾಗಂದಡಿ , ಶಂಕರ ಕೋಟ್ಯಾನ್, ಕೃಷ್ಣ ಪ್ಪ , ದೇವಸ್ಥಾನ ಮಾಜಿ ಗುರಿಕಾರರಾದ ಬಾಬು ರಾಣ್ಯ, ಮೋಹನ್ ಗುರಿಕಾರ, ಕೃಷ್ಣ ಪಾತ್ರಿ, ಈಶ್ವರ , ವೆಂಕಪ್ಪ, ಒಂಬತ್ತು ಮಾಗಣೆಯ ಭಕ್ತರು ಉಪಸ್ಥಿರಿದ್ದರು. ಹರೀಶ್ ಕಾರ್ಯಕ್ರಮ ನಿರೂಪಿಸಿದರು.

Social Icons