ಕರ್ನಾಟಕದಲ್ಲಿ ಇನ್ನು ಮುಂದೆ ಬೇಕಾಬಿಟ್ಟಿ ಶವರ್ಮಾ ತಯಾರಿಸುವಂತಿಲ್ಲ

 



ಬೆಂಗಳೂರು: ಶವರ್ಮಾ ಸೇವಿಸಿ ಅಸ್ವಸ್ಥಗೊಂಡ ಹಲವು ಪ್ರಕರಣಗಳು ವರದಿಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಶವರ್ಮಾ ತಯಾರಿಸಲು ನೋಂದಣಿ ಮತ್ತು ಪರವಾನಿಗೆ ಪಡೆದುಕೊಳ್ಳಲು ಸೂಚನೆ ನೀಡಿದೆ.


ಎಲ್ಲ ಶವರ್ಮಾ ತಯಾರಕರು fssaiಯಲ್ಲಿ  ನೋಂದಾಯಿಸಿಕೊಳ್ಳಬೇಕಿದ್ದು,   ಪರವಾನಿಗೆಯನ್ನು ವ್ಯಾಪಾರದ ಸ್ಥಳದಲ್ಲೇ ಪ್ರದರ್ಶಿಸಬೇಕು. ತಾಜಾ ಶವರ್ಮಾವನ್ನೇ ಮಾರಾಟ ಮಾಡಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.


ಇತ್ತೀಚಿನ ದಿನಗಳಲ್ಲಿ ಶವರ್ಮಾ ಸೇವಿಸಿ ಅಸ್ವಸ್ಥಗೊಂಡ ಹಲವು ವರದಿಗಳಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಈ ಸೂಚನೆ ನೀಡಿದೆ. 

ಶವರ್ಮಾ ತಯಾರಿಕಾ ವಿಧಾನ, ಮಾಂಸ ಸಂಗ್ರಹಣೆ ಮೊದಲಾದವುಗಳಿಂದಾಗಿ ಬ್ಯಾಕ್ಟೀರಿಯಾ, ಈಸ್ಟ್ ಸೃಷ್ಟಿ, ನೈರ್ಮಲ್ಯ ಕೊರತೆಯಿಂದಾಗಿ ಭಕ್ಷ್ಯ ವಿಷವಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿತ್ತು.