ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಗುರುವಾರ ದಿನವಿಡೀ ಮಳೆ ಸುರಿದರೂ ಹಾನಿಗಳು ಬುಧವಾರಕ್ಕೆ ಹೋಲಿಸಿದರೆ ಕಡಿಮೆ ಇತ್ತು. ಬೆಳಗಿನ ಜಾವ ತಹಸೀಲ್ದಾರ್ ಅರ್ಚನಾ ಭಟ್ ಬಿಇಒ ಮಂಜುನಾಥನ್ ಜೊತೆ ಸಮಾಲೋಚನೆ ನಡೆಸಿ, ಮಳೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಶಾಲೆ, ಹೈಸ್ಕೂಲುಗಳಿಗೆ ರಜೆ ಕೊಡುವ ನಿರ್ಧಾರಕ್ಕೆ ಬಂದರು. ಕೂಡಲೇ ಸಾಮಾಜಿಕ ಜಾಲತಾಣಗಳ ಮೂಲಕ ಇಲಾಖೆಯಿಂದ ಮಾಹಿತಿ ಹೋಗಿ, ಶಾಲೆ, ಹೈಸ್ಕೂಲುಗಳ ಮಕ್ಕಳು ಹೊರಟವರು ಮನೆಯಲ್ಲೇ ಉಳಿದರು. ಕೆಲವರು ಬಸ್ ಹತ್ತಿ ಶಾಲೆಗೆ ತೆರಳಿದವರು ಮತ್ತೆ ಮರಳಬೇಕಾಯಿತು.
ಬಂಟ್ವಾಳ ಕಸಬಾ ಗ್ರಾಮದ ಕೆಳಗಿನ ಮಂಡಡಿ ಎಂಬಲ್ಲಿ ನಂದಿನಿ ಎಂಬವರ ಮನೆಯ ಮೇಲ್ಛಾವಣಿಗೆ ಭಾಗಶಃ
ಹಾನಿ ಆಗಿದೆ. ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿ ಯೋಗೀಶ್ ಪೂಜಾರಿ ಅವರ ಮನೆಗೆ ಮರ ಬಿದ್ದು
ಹಾನಿಯಾಗಿದೆ ಎಂದು ತಾಲೂಕು ಕಚೇರಿ ವಿಪತ್ತು ನಿರ್ವಹಣಾ ಘಟಕ ಮಾಹಿತಿ ನೀಡಿದೆ.

Social Icons