ಮಂಗಳೂರು: ಕಾಸರಗೋಡು ಶಾಲೆಯಲ್ಲಿ ಶೂಧರಿಸಿದ್ದಕ್ಕೆ ಅಪ್ರಾಪ್ತನಿಗೆ ಸೀನಿಯರ್ ವಿದ್ಯಾರ್ಥಿಗಳಿಂದ ರ‌್ಯಾಗಿಂಗ್ - ಥಳಿತದಿಂದ ಕಣ್ಣು, ಕಿವಿಗೆ ಹಾನಿ





ಮಂಗಳೂರು: ನಗರದ ಗಡಿಭಾಗದ ಕಾಸರಗೋಡಿನ ಶಾಲೆಯಲ್ಲಿ ಅಪ್ರಾಪ್ತನೊಬ್ಬ ಶೂಧರಿಸಿ ಬಂದಿದ್ದಾನೆಂದು ಸೀನಿಯರ್ ವಿದ್ಯಾರ್ಥಿಗಳು ರ‌್ಯಾಗಿಂಗ್ ನಡೆಸಿ ಹಿಗ್ಗಾಮುಗ್ಗಾ ಥಳಿಸಿರುವರು ಘಟನೆ ನಡೆದಿದೆ.

ಕಾಸರಗೋಡಿನ ಚಿತ್ತಾರಿ ಜಮಾತ್ ಹೈಯರಿ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಕಾಸರಗೋಡು ಜಿಲ್ಲೆಯ ಪಳ್ಳಿಕೆರೆ ಬಿಲಾಲ್ ನಗರದ ನಿವಾಸಿ, ಈ ಶಾಲೆಯ ಕಿರಿಯ ವಿದ್ಯಾರ್ಥಿಗೆ ಸೀನಿಯರ್ ವಿದ್ಯಾರ್ಥಿಗಳು ಥಳಿಸಿದ್ದಾರೆ. ಈತ ಶೂ ಧರಿಸಿ ಶಾಲೆಗೆ ಬಂದಿರುವುದಕ್ಕೆ ಮೊದಲು ಹಾಡುವಂತೆ ಒತ್ತಾಯಿಸಿ ರ‌್ಯಾಗಿಂಗ್ ಮಾಡಲಾಗಿದೆ. ಆತ ಹಾಡಲು ನಿರಾಕರಿಸಿದ್ದಾನೆ. ಆದ್ದರಿಂದ ಶಾಲೆಯ ಬಳಿಯ ಬಸ್ ನಿಲ್ದಾಣದಲ್ಲಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಥಳಿತದಿಂದ ಬಾಲಕನ ಕಿವಿ ಹಾಗೂ ಕಣ್ಣಿಗೆ ಹಾನಿಯಾಗಿದೆ.

ಈ ಬಗ್ಗೆ ಕಾಸರಗೋಡಿನ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.