ಪುತ್ತೂರು: ಪುತ್ತೂರಿನಿಂದ ಪರ್ಲಡ್ಕ- ವಳತ್ತಡ್ಕ, ಮಾರ್ಗವಾಗಿ ಗುಮ್ಮಟಗದ್ದೆಗೆ ನಾಳೆಯಿಂದ (ಜು.9) ಸರಕಾರಿ ಬಸ್ ಸೇವೆ ಆರಂಭವಾಗಲಿದೆ.
ಚೆಲ್ಯಡ್ಕ ಸೇತುವೆ ಮುಳುಗಡೆ ಮತ್ತು ಅಪಾಯಕಾರಿಯಾಗಿದೆ ಎಂದು ಹಿಂದೆ ಈ ಮಾರ್ಗದ ಬಸ್ ಸೇವೆಯನ್ನು ಜಿಲ್ಲಾಧಿಕಾರಿ ರದ್ದು ಮಾಡಿದ್ದರು. ಈ ಬಗ್ಗೆ ಸ್ಥಳೀಯರು ಶಾಸಕ ಅಶೋಕ್ ರೈ ಅವರಲ್ಲಿ ಮನವಿ ಮಾಡಿದ್ದರು. ಬಸ್ ಇಲ್ಲದೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದನ್ನು ಗಮನಿಸಿಸ ಶಾಸಕರು ಬಸ್ ಸೇವೆ ಆರಂಬಿಸುವಂತೆ ಸೂಚನೆ ನೀಡಿದ್ದರು. ಅದರಂತೆ ನಾಳೆಯಿಂದ ಬಸ್ ಸೇವೆ ಆರಂಭವಾಗಲಿದೆ . ಬೆಳಿಗ್ಗೆ 8 ಗಂಟೆಗೆ ಮಧ್ಯಾಹ್ನ 2 ಮತ್ತು ಸಂಜೆ 5.30 ಕ್ಕೆ ಗುಮ್ಮಟೆಗದ್ದೆಯಿಂದ ಬಸ್ಸು ಹೊರಡಲಿದೆ.
ಜಿಲ್ಲಾಧಿಕಾರಿ ಮೇರೆಗೆ ಇಲ್ಲಿನ ಬಸ್‌ಸಂಚಾರ ಬಂದ್ ಮಾಡಲಾಗಿತ್ತು. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವುದು ನನ್ನಗಮನಕ್ಕೆ ಬಂದಿದ್ದು ನಾಳೆಯಿಂದ ಬಸ್ ಸಂಚಾರ ಪ್ರಾರಂಭ ಮಾಡಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ
Social Icons