PUTTUR: ಇನ್ಮುಂದೆ ಬೆಳಗ್ಗೆ 5 ಗಂಟೆಗೆ ಎದ್ದು ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ: ಕು ಕಚೇರಿಯಲ್ಲೇ ಆಧಾರ್ ವ್ಯವಸ್ಥೆ : ಶಾಸಕ ಅಶೋಕ್ ರೈ

ವರದಿ: ಕವಿತಾ ಕೆ ಮಾಣಿ

ಪುತ್ತೂರು: ನೂತನ ಆಧಾರ್ ಕೇಂದ್ರದ ಉದ್ಘಟನಾ ಕಾರ್ಯಕ್ರಮ ಪುತ್ತೂರು ತಾಲೂಕು ಕಚೇರಿಯಲ್ಲಿ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ನೂತನ ಆಧಾರ್ ಕೇಂದ್ರವನ್ನು ಉದ್ಘಾಟಿಸಿದ್ರು.

ಬಳಿಕ ಮಾತನಾಡಿದ ಅವರು  ಪುತ್ತೂರು  ತಾಲೂಕು ಕಚೇರಿಯಲ್ಲಿ ಆಧಾರ್ ಕೇಂದ್ರವನ್ನು ತೆರೆಯಲಾಗಿದೆ. ಆಧಾರ್ ಕಾರ್ಡ್ ಮಾಡಿಸಲು ಬೆಳಿಗ್ಗೆ 5 ಗಂಟೆಗೆ ಎದ್ದು ಅಂಚೆ ಕಚೇರಿ ಮುಂದೆ ಇನ್ನು ಕ್ಯೂ ನಿಲ್ಲುವ ಅಗತ್ಯವಿಲ್ಲ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.

ನೂತನ ಕೇಂದ್ರದಲ್ಲಿ 18 ವರ್ಷ ಪ್ರಾಯದವರೆಗಿನ ಮಕ್ಕಳಿಗೆ ಹೊಸ ಆಧಾರ್ ,18 ರ ನಂತರದವರ ಆಧಾರ್ ತಿದ್ದುಪಡಿ. ನಂಬರ್ ತಿದ್ದುಪಡಿ, ವಿಳಾಸ ತಿದ್ದುಪಡಿ ಸೇರಿದಂತೆ ತಿದ್ದುಪಡಿ‌ಮಾಡಲು ಅವಕಾಶವಿದೆ. ವಾರದ ರಜಾ ದಿನ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕೇಂದ್ರ ಕಾರ್ಯಾಚರಿಸಲಿದೆ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು‌ಎಂದು ಹೇಳಿದರು. ತಹಶಿಲ್ದಾರ್ ಪುರಂದರ್ ಹೆಗ್ಡೆ,ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ,ಕೆಪಿಸಿಸಿ  ಸಂಯೋಜಕರಾದ ಚಂದ್ರಹಾಸ ಶೆಟ್ಟಿ, ಬ್ಲಾಕ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.