Editorial: ಜಾಗ್ರತೆ! ಪಾರಾಸಿಟಾಮೊಲ್, ಡೋಲೋ ಮಾತ್ರೆಗಳು ನೀವೆನಿಸಿದಂತಲ್ಲ




 ಮಳೆಗಾಲದಲ್ಲಿ ಎಂದಿನಂತೇ ಶೀತಜ್ವರಗಳು ಮುಂದುವರಿದಿದೆ.‌ ಆದರೆ ಕರ್ನಾಟಕದಾದ್ಯಂತ 8 ಸಾವಿರಕ್ಕಿಂತಲೂ ಅಧಿಕ ಮಂದಿಗೆ ಡೆಂಗ್ಯೂ ಬಾಧಿಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಡೆಂಗ್ಯೂ ಜ್ವರಕ್ಕೆ ಮದ್ದು ಕಂಡು ಹಿಡಿದಿಲ್ಲ. ಸಾಮಾನ್ಯ ಶೀತ ಜ್ವರಕ್ಕೆ ನೀಡುವ ಚಿಕಿತ್ಸೆಯನ್ನೇ ಇಲ್ಲೂ ನೀಡಲಾಗುತ್ತಿದೆ. ಮತ್ತು ರೋಗಿಗೆ ಹೆಚ್ಚಿನ ವಿಶ್ರಾಂತಿಯನ್ನು ವೈದ್ಯರು ನಿರ್ದೇಶಿಸುತ್ತಾರೆ.

ಆದರೆ ಇದಕ್ಕೆ ಔಷಧ ಇಲ್ಲ ಎಂಬ ಕಾರಣಕ್ಕೆ ಸ್ವಯಂ ಜನಸಾಮಾನ್ಯರು ಸ್ವಯಂ ವೈದ್ಯರಾಗುವುದೇ ರಾಜ್ಯದ ಸದ್ಯದ ಅತಿ ದೊಡ್ಡ ಸಮಸ್ಯೆ.

ಈ ನಡುವೆ ರಾಜ್ಯದಲ್ಲಿ ಪಾರಾಸಿಟಾಮೊಲ್ ಮಾತ್ರೆಯ ಕೊರೆತೆ ಇದೆ ಎಂಬ ವರದಿಯಾಗಿತ್ತು.

ಇದಕ್ಕೆ ಜನ ಸ್ವಯಂ ವೈದ್ಯರಾಗಿರುವುದೇ ಕಾರಣ. ಜ್ವರ ಬಂದ ತಕ್ಷಣ ಮಳೆಗಾಲದಲ್ಲಿ ಇದೆಲ್ಲಾ ಸಾಮಾನ್ಯ ಎಂದು ತಾವೇ ನಿರ್ಧರಿಸಿ ಮೆಡಿಕಲ್‌ನಿಂದ ಪಾರಾಸಿಟಾಮೊಲ್ ಇಲ್ಲವೇ ಡೋಲೊ ಖರೀದಿಸಿ ಉಪಯೋಗಿಸುತ್ತಾರೆ. ಆದರೆ ಈ ರೀತಿ ಸ್ವಯಂ ವೈದ್ಯರಾಗುವುದು ನಿಮ್ಮ ಜೀವಕ್ಕೆ ಕುತ್ತು ತರಲಿದೆ ಎಂದು ಇತ್ತೀಚಿನ ವರದಿಗಳು ಹೇಳುತ್ತಿದೆ. 

ರೋಗ ನಿರ್ಣಯ ಮಾಡದೇ ಔಷಧ ಸೇವಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಹೀಗಾಗಿ ಸ್ವಯಂ ವೈದ್ಯರಾಗುದು ಬೇಡ. ಜ್ವರ ಕಂಡು ಬಂದರೆ ಪರೀಕ್ಷೆಗೆ ಒಳಪಟ್ಟು, ವೈದ್ಯರ ಸಲಹೆ ಮೇರೆಗೆ ಔಷಧ ಪಡೆಯುವುದೇ ಸೂಕ್ತ. ಪಾರಾಸಿಟಾಮೊಲ್ ಗಳು ಕಿಡ್ನಿ ವೈಫಲ್ಯ ದಂತಹ ಮಾರಕ ರೋಗಗಳಿಗೆ ಆಹ್ವಾನ ನೀಡುತ್ತದೆ. ನೋವು ನಿವಾರಕ ಈ ಮಾತ್ರೆಗಳು ಒಂದು ಹಂತಕ್ಕೆ ನೆಮ್ಮದಿ ಕೊಟ್ಟರೂ, ಶಾಶ್ವತವಾಗಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿಸುತ್ತದೆ.

ಹಾಗಾಗಿ ಈ ನೋವು ನಿವಾರಕ ಪಾರಾಸಿಟಾಮೊಲ್, ಡೋಲೊ ಮಾತ್ರೆಗಳು ನೀವೆನಿಸಿದಂತೆ ಅಲ್ಲ.